ವೀರಾಜಪೇಟೆ, ಜೂ. 12: ಕಳೆದ ಆರು ದಿನಗಳಿಂದ ವೀರಾಜಪೇಟೆ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭಾರೀ ಗಾಳಿ ಮಳೆಗೆ ಇಂದಿನ ತನಕ 15ಮನೆಗಳು ಜಖಂಗೊಂಡಿದ್ದು, ರೆವಿನ್ಯೂ ಸಿಬ್ಬಂದಿಗಳ ಮಹಜರು ಪ್ರಕಾರ ಒಟ್ಟು ರೂ 1,93,000 ನಷ್ಟ ಸಂಭವಿಸಿದೆ. ನಿನ್ನೆ ದಿನ ರಾತ್ರಿ ಬಿದ್ದ ಮಳೆಗೆ ಇಂದು ಬೆಳಿಗ್ಗೆ ಹುದಿಕೇರಿ ಗ್ರಾಮದ ಎಚ್.ಬಿ.ಸೋಮಯ್ಯ ಎಂಬವರಿಗೆ ಸೇರಿದ ಮನೆಯ ಒಂದು ಭಾಗ ಜಖಂಗೊಂಡಿದ್ದು ರೂ. 5,300 ನಷ್ಟ ಉಂಟಾಗಿದೆ. ತಿತಿಮತಿಯ ಸೀತಾ ಎಂಬವರಿಗೆ ಸೇರಿದ ಮನೆ ಜಖಂ ಗೊಂಡಿದ್ದು, ರೂ. 15000, ಅದೇ ಊರಿನ ಜೋಯಿಸ್ ಎಂಬವರಿಗೆ ಸೇರಿದ ಮನೆ ಜಖಂಗೊಂಡಿದ್ದು ರೂ. 30,000, ಕೈಕೇರಿ ಗ್ರಾಮದ ಮಾಚಯ್ಯ ಎಂಬವರಿಗೆ ಸೇರಿದ ಮನೆ ಜಖಂಗೊಂಡು ರೂ. 10.000 ನಷ್ಟ ಉಂಟಾಗಿದೆ. ಆರು ದಿನಗಳಿಂದ ಮಳೆ ಹಾನಿಯಿಂದ ಇಂದಿನವರೆಗೆ ರೂ. 1.93,000 ನಷ್ಟ ಉಂಟಾಗಿರುವದಾಗಿ ಇಂದು ಜಿಲ್ಲಾಧಿಕಾರಿ ಕಚೇರಿಗೆ ವರದಿ ಮಾಡಲಾಗಿದೆ.
ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜ್ ಅವರು ನಿನ್ನೆ ದಿನ ಸಿದ್ದಾಪುರ ಬಳಿಯ ಕರಡಿಗೋಡು ಕಾವೇರಿ ಹೊಳೆ ಬದಿ ಹಾಗೂ ಪಾಲಿಬೆಟ್ಟಕ್ಕೂ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು. ಇಂದು ತಹಶೀಲ್ದಾರ್
(ಮೊದಲ ಪುಟದಿಂದ) ಕುಟ್ಟ, ತಿತಿಮತಿ ಮಾಯಮುಡಿ, ಬಾಳೆಲೆ, ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ ಸೇರಿದಂತೆ ವಿವಿಧೆಡೆಗಳಿಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿದರು.
ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗ್ಗಿನಿಂದ ಇಂದು ಬೆಳಗ್ಗಿನ 8 ಗಂಟೆಯವರೆಗೆ ಒಟ್ಟು 4.05 ಇಂಚುಗಳಷ್ಟು ಮಳೆ ಸುರಿದಿದೆ.
ಮಳೆಗೆ ನೆಹರೂ ನಗರದ ಅಶೋಕ್ ಎಂಬವರ ಮನೆಯ ಒತ್ತಾಗಿದ್ದ ಮಣ್ಣಿನ ಬರೆ ಕುಸಿದಿದೆ. ಇದೇ ರೀತಿಯಲ್ಲಿ ಇದೇ ಪ್ರದೇಶದ ಟಿ.ಪಿ.ಮಣಿ ಎಂಬ ಮಹಿಳೆಯ ಮನೆಯ ಬದಿಯ ಬರೆ ಕುಸಿದು ಮನೆ ಜಖಂಗೊಂಡಿದೆ ಎಂದು ಇಲ್ಲಿನ ಪಟ್ಟಣ ಪಂಚಾಯಿತಿಗೆ ದೂರು ನೀಡಲಾಗಿದೆ. ಕೊಡಗು-ಕೇರಳ ಗಡಿಪ್ರದೇಶದಲ್ಲಿಯೂ ಬಿರುಸಿನ ಮಳೆಯಾಗುತ್ತಿದ್ದರೂ, ಅಂತರಾಜ್ಯ ರಸ್ತೆ ಸಂಚಾರಕ್ಕೆ ಯಾವದೇ ಅಡಚಣೆ ಉಂಟಾಗಿಲ್ಲ ಎಂದು ಲೋಕೋಪಯೋಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗೆ ಹಾನಿ
ಬಲ್ಯಮುಂಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಗುಟಗೇರಿ ಕಾಲೋನಿ ನಿವಾಸಿಗಳಾದ ಹೆಚ್.ಎಸ್. ಪ್ರವೀಣ ಹಾಗೂ ಹೆಚ್.ಎಸ್. ಪ್ರಕಾಶ್ ಎಂಬವರ ಎರಡು ಮನೆಯ ಮಧ್ಯ ಭಾಗಕ್ಕೆ ಭಾರೀ ಮರವೊಂದು ಉರುಳಿ ಬಿದ್ದಿದ್ದು, ಪ್ರವೀಣ ಅವರ ಮನೆಗೆ ಭಾಗಶಃ ಹಾನಿ ಆಗಿದೆ. ಸ್ಥಳಕ್ಕೆ ಸ್ಥಳೀಯ ಮುಖಂಡ ಚೀರಂಡ ಕಂದಾ ಸುಬ್ಬಯ್ಯ ಹಾಗೂ ಹುದಿಕೇರಿ ರೆವಿನ್ಯೂ ಅಧಿಕಾರಿಗಳಾದ ನಿಶಾಂತ್, ನಿತೀನ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸಂಪರ್ಕ ಕಡಿತ
ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಗೇರಿ, ಬಾಳೆಲೆ ದೋಣಿ ಕಡವು ಎಂಬ ಸಂಪರ್ಕ ರಸ್ತೆ ಹಾನಿಯಾಗಿದ್ದು, ಈ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಭಾರೀ ಮಳೆಯಿಂದ ಕಾಂಕ್ರಿಟ್ ರಸ್ತೆಯ ಒಂದು ಭಾಗ ಕುಸಿದಿದ್ದು, ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ಸ್ಥಳಕ್ಕೆ ಬಾಳೆಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೊಕ್ಕೆಂಗಡ ರಂಜನ್, ಭೇಟಿ ನೀಡಿದ್ದು, ರಸ್ತೆ ಮಾರ್ಗದಲ್ಲಿ ಯಾರು ಸಂಚರಿಸದಂತೆ ಮುಂಜಾಗೃತವಾಗಿ ಬ್ಯಾರಿಕೇಡ್ನ್ನು ಅಳವಡಿಸಿದ್ದಾರೆ.
ತುಂಬಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ
ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಿಹರ ಟಿ.ಶೆಟ್ಟಿಗೇರಿ ರಸ್ತೆಯ ಸಂಪರ್ಕ ಕಡಿತಗೊಂಡಿದೆ. ಲಕ್ಷ್ಮಣತೀರ್ಥ ನದಿಯು ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟವನ್ನು ಮೀರಿ ಸೇತುವೆ ಮೇಲೆ ನೀರು ಹರಿದು ಹೋಗುತ್ತಿರುವದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಲೈನ್ಮ್ಯಾನ್ಗೆ ಗಾಯ
ಸಿದ್ದಾಪುರ: ಇಂಜಲಗರೆಯಲ್ಲಿ ವಿದ್ಯುತ್ ದುರಸ್ಥಿಪಡಿಸುವ ವೇಳೆ ಲೈನ್ಮ್ಯಾನ್ ಕಂಬದಿಂದ ಕೆಳಗೆ ಬಿದ್ದು ಕೈಗೆ ಗಾಯವಾಗಿರುವ ಘಟನೆ ನಡೆದಿದೆ.
ಸಿದ್ದಾಪುರ ಸೆಸ್ಕ್ನ ಸಿಬ್ಬಂದಿ ಪರಶುರಾಮ್ ಇಂಜಲಗರೆಯ ಕಂಬಕ್ಕೇರಿ ವಿದ್ಯುತ್ ದುರಸ್ಥಿಪಡಿಸುವ ವೇಳೆ ಏಣಿಯಿಂದ ಕೆಳಗೆಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪರಶುರಾಮ್ನ ಕೈಗೆ ಗಾಯವಾಗಿದ್ದು, ವೀರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿ. ಬಾಡಗದಲ್ಲಿ ತೀತಿಮಾಡ ಚಿಣ್ಣಪ್ಪ ಎಂಬವರ ಗದ್ದೆಯಲ್ಲಿ ತೋಡು ಹೊಡೆದು ಗದ್ದೆ ಹಾನಿಗೀಡಾಗಿದೆ.
ಶ್ರೀಮಂಗಲ ಶ್ರೀಕೃಷ್ಣ ದೇವಸ್ಥಾನ ರಸ್ತೆಯಲ್ಲಿನ ಮೋರಿ ಕುಸಿದು ಸಂಪರ್ಕ ಕಡಿತಗೊಂಡಿದೆ. ಆ ಭಾಗದ ಜನರು ಪಟ್ಟಣಕ್ಕೆ ತೊಂದರೆಯಾಗಿದೆ. ನಾಲ್ಕೇರಿ ಮೂಲಕ ಹರಿದು ಹೋಗುವ ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ಕಾಫಿ ತೋಟ ಜಲಾವೃತಗೊಂಡಿದೆ.
ಸಿದ್ದಾಪುರ : ಮಳೆಯಿಂದಾಗಿ ಕರಡಿಗೋಡುವಿನಲ್ಲಿ ಪ್ರವಾಹದ ನೀರಿನಲ್ಲಿ ಏರಿಕೆ ಕಂಡು ಬಂದಿದೆ. ಕರಡಿಗೋಡು - ಚಿಕ್ಕನಹಳ್ಳಿಗೆ ತೆರಳುವ ಕಿರು ಸೇತುವೆ ಪ್ರವಾಹದಿಂದಾಗಿ ಮುಳುಗಡೆಗೊಂಡಿದೆ. ಇಳಿಜಾರಿನ ಮನೆಗಳ ಬಳಿ ಪ್ರವಾಹ ನೀರು ಸಮೀಪಿಸುತ್ತಿದ್ದು, ಗಾಳಿ ಮಳೆಗೆ ಕರಡಿಗೋಡು ಗ್ರಾಮದ ಉಷ ಎಂಬವರ ಮನೆಯ ಮೇಲೆ ಮರವೊಂದು ಬಿದ್ದು, ಮೆನೆಗೆ ಹಾನಿಯುಂಟಾಗಿದೆ. ಸ್ಥಳಕ್ಕೆ ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು, ಗ್ರಾ.ಪಂ. ಸದಸ್ಯರಾದ ಪೂವಮ್ಮ, ಕರ್ಪಯ್ಯ ಹಾಗೂ ಕಂದಾಯ ಪರಿವೀಕ್ಷಕ ಅನಿಲ್, ಗ್ರಾಮ ಲೆಕ್ಕಿಗ ಮಂಜುನಾಥ್, ಸಹಾಯಕ ಕೃಷ್ಣ, ಮಂಜು, ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂದಾಯ ಇಲಾಖಾಧಿಕಾರಿಗಳು ಸ್ಥಳದಲ್ಲೇ ಮೊಖಂ ಹೂಡಿದ್ದು, ಮುಂಜಾಗೃತಾ ಕ್ರಮವಾಗಿ ನದಿ ದಡದ ಸಮೀಪ ಬ್ಯಾರಿಕೆಡ್ಗಳನ್ನು ಅಳವಡಿಸಿ ರಸ್ತೆಯಲ್ಲಿ ಯಾವದೇ ವಾಹನಗಳು ತೆರಳದಂತೆ ಕ್ರಮ ಕೈಗೊಂಡಿದ್ದಾರೆ.
ನಾಪೆÇೀಕ್ಲು : ನಾಪೆÇೀಕ್ಲು ವಿಭಾಗಕ್ಕೆ ಸುಮಾರು ನಾಲ್ಕು ಇಂಚಿಗೂ ಅಧಿಕ ಮಳೆಯಾಗಿದೆ. ಗುಡುಗು ಸಹಿತ ನಿರಂತರ ಒಂದೇ ಸಮನೆ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ಜನರು ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದಾಗಿ ನಾಪೆÇೀಕ್ಲು - ಮೂರ್ನಾಡು ಬಳಿಯ ಬೊಳಿಬಾಣೆ ಎಂಬಲ್ಲಿ ಕಾವೇರಿ ನದಿ ಪ್ರವಾಹದಿಂದ ರಸ್ತೆ ಮೇಲೆ 4 ಅಡಿಗಳಿಗೂ ಅಧಿಕ ನೀರಿದ್ದು, ಎಲ್ಲಾ ವಾಹನಗಳ ಸಂಚಾರವನ್ನು ಸ್ಥಗಿvಗೊಳಿಸಲಾಗಿದೆ. ನಾಪೆÇೀಕ್ಲು - ಪಾರಾಣೆ ವೀರಾಜಪೇಟೆ ಸಂಪರ್ಕಿಸುವ ಕೈಕಾಡು ಬಳಿಯ ಎತ್ತುಕಡವು ಸೇತುವೆ ಬಳಿಯಲ್ಲಿ ನೀರು ತುಂಬಿ ಹರಿಯುತ್ತಿದ್ದು ಸಂಚಾರ ಕಡಿತಗೊಳ್ಳುವ ಸಾಧ್ಯತೆ ಇದೆ. ಕಕ್ಕಬ್ಬೆ ಬಳಿಯ ನೆಟ್ಟಮಾಡು ಮತ್ತು ಇಗ್ಗುತ್ತಪ್ಪ ದೇವಳ ರಸ್ತೆಯಲ್ಲಿ ನೀರು ಅಪಾಯದಲ್ಲಿ ಹರಿಯುತ್ತಿದೆ. ಈ ವಿಭಾಗಕ್ಕೆ ಮಳೆಯು ಮುಂದುವರೆಯುವ ಲಕ್ಷಣಗಳು ಕಂಡು ಬರುತ್ತಿದ್ದು, ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಗ್ರಾಮೀಣ ಪ್ರದೇಶದ ಮಳೆಯ ವಿವರ ಪಡೆದು ಕ್ರಮ ಕೈಗೊಳ್ಳಬೇಕಿದೆ. ರಜೆ ಇಲ್ಲ ನಂತರ ರಜೆ ಎಂದು ಜನರನ್ನು ದಾರಿ ತಪ್ಪಿಸುವದು ಬೇಡ ಎಂದು ಮಕ್ಕಳ ಪೋಷಕರು ಪತ್ರಿಕೆಯೊಂದಿಗೆ ದೂರಿದ್ದಾರೆ.
ಪಾಲೂರಿನ ಹರೀಶ್ಚಂದ್ರ ದೇವಾಲಯದ ಸುತ್ತು ಕಾವೇರಿ ನದಿ ಪ್ರವಾಹದ ನೀರಿನಿಂದ ಮುಳುಗಡೆಯಾಗಿ 3 ದಿನದಿಂದ ಪೂಜೆ ಕಾರ್ಯ ಸ್ಥಗಿತಗೊಂಡಿದೆ.
ಅಯ್ಯಂಗೇರಿ ಸಣ್ಣಪುಲಿಕೋಟುವಿನಲ್ಲಿ ಭಾರಿ ಮಳೆಗೆ ಅಯ್ಯಂಗೇರಿಯಲ್ಲಿ ರಸ್ತೆ ಮೇಲೆ ನೀರು ತುಂಬಿ ನಾಪೋಕ್ಲು-ಭಾಗಮಂಡಲ ಸಂಪರ್ಕ ಕಡಿತಗೊಂಡಿತ್ತು. ಭಾಗಮಂಡಲದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.