ಮಡಿಕೇರಿ, ಜೂ. 12: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ನಡೆಸಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನಗರದ ಸಂತ ಮೈಕಲರ ಶಾಲೆಯ ವಿದ್ಯಾರ್ಥಿನಿ ಹೆಚ್.ಜಿ. ಅಪೂರ್ವ ಕನ್ನಡದಲ್ಲಿ 125 ಕ್ಕೆ 125 ಅಂಕಗಳೊಂದಿಗೆ ಸಾಧನೆ ತೋರಿದ್ದಾಳೆ. ಈಕೆ ಈ ಮೊದಲು 585 ಅಂಕಗಳಿಂದ ತೇರ್ಗಡೆಗೊಂಡಿದ್ದು, ಮರು ಮೌಲ್ಯಮಾಪನದಿಂದ 611 ಅಂಕಗಳಿಸಿ ಮಡಿಕೇರಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಅಪೂರ್ವ ಸ್ಥಳೀಯ ನಿವಾಸಿಗಳಾದ ಗುರುಪ್ರಸಾದ್ ಹಾಗೂ ಮೀರಾ ದಂಪತಿಯ ಪುತ್ರಿ.