*ಗೋಣಿಕೊಪ್ಪಲು, ಜೂ. 12: ಅಕ್ರಮವಾಗಿ ಮರಳು ತಯಾರಿಸುತ್ತಿದ್ದ ಘಟಕದ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿ 2 ಲಾರಿ ಒಂದು ಮೋಟಾರನ್ನು ವಶಪಡಿಸಿಕೊಂಡಿದ್ದಾರೆ.

ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ ಕಾಡ್ಲಯ್ಯಪ್ಪ ದೇವಸ್ಥಾನದ ಗದ್ದೆಯಲ್ಲಿ ಅಕ್ರಮವಾಗಿ ಮರಳು ತಯಾರಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ಧಾಳಿ ನಡೆಸಿ ಸ್ಥಳೀಯ ನಿವಾಸಿ ಜಮ್ಮಡ ಸೋಮಣ್ಣ ಅವರ ಎರಡು ಲಾರಿ ಹಾಗೂ ಮೋಟಾರು ಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ಲಾರಿಯಷ್ಟು ಮರಳು ತುಂಬಿ ಸಾಗಾಟಕ್ಕೆ ತಯಾರಿ ನಡೆಸಲಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಆಗಮಿಸುತ್ತಿದ್ದಂತೆ ಅಲ್ಲಿನ ಕೆಲಸ ಕಾರ್ಮಿಕರು ಮತ್ತು ಸಂಬಂಧಪಟ್ಟವರು ಪರಾರಿಯಾಗಿ ದ್ದಾರೆ ಎಂದು ಪೆÇನ್ನಂಪೇಟೆ ಕಂದಾಯ ಪರಿವೀಕ್ಷಕ ರಾಧಕೃಷ್ಣ, ಗ್ರಾಮ ಲೆಕ್ಕಿಗ ಮಂಜುನಾಥ್ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಆರ್. ಗೊವಿಂದ ರಾಜ್ ಬೇಟಿ ನೀಡಿದರು. ಧಾಳಿ ಸಂದರ್ಭ ಕಂದಾಯ ಪರಿವೀಕ್ಷಕ ಮಂಜುನಾಥ್, ಸಿಬ್ಬಂಧಿಗಳಾದ ಉಮೇಶ್, ಸುನೀಲ್, ಸರೋಜ ಹಾಜರಿದ್ದರು.

- ಚಿತ್ರ, ವರದಿ : ದಿನೇಶ್. ಎನ್.ಎನ್.

ಕುಶಾಲನಗರ, ಜೂ. 12: ಕುಶಾಲನಗರ ಒಳಚರಂಡಿ ಯೋಜನೆ ಕಾಮಗಾರಿ ಕೂಡಲೆ ಪೂರ್ಣಗೊಳಿ ಸುವಂತೆ ಆಗ್ರಹಿಸಿ ಕುಶಾಲನಗರ ಹಿತರಕ್ಷಣಾ ವೇದಿಕೆ ಸದಸ್ಯರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿರಿಸಿದೆ.

ಹಿತರಕ್ಷಣಾ ಸಮಿತಿ ಸಂಚಾಲಕ ಕೆ.ಜಿ.ಮನು ನೇತೃತ್ವದಲ್ಲಿ ಸ್ಥಳೀಯ ಕಾರು ನಿಲ್ದಾಣದ ವೇದಿಕೆಯಲ್ಲಿ ಸತ್ಯಾಗ್ರಹ ಕೈಗೊಂಡಿರುವ ವೇದಿಕೆ ಪ್ರಮುಖರು 52 ಕೋಟಿ ರೂ. ವೆಚ್ಚದ ಒಳಚರಂಡಿ ಯೋಜನೆ ಕಾಮಗಾರಿ ಶೇ.70 ರಷ್ಟು ಮಾತ್ರ ಪೂರ್ಣ ಗೊಂಡಿದ್ದು ಸ್ಥಗಿತಗೊಂಡಿರುವ ಕಾಮಗಾರಿ ಪುನರಾರಂಭಿಸ ಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಮಧ್ಯಾಹ್ನ ಮುಖ್ಯರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ವೇದಿಕೆ ಪ್ರಮುಖರಾದ ಕೆ.ಎನ್.ದೇವರಾಜ್, ಎಂ.ಎಸ್.ರಾಜೇಶ್, ಹರೀಶ್, ಡಿ.ವಿ.ರಾಜೇಶ್, ಮಂಜು, ಎಂ.ಡಿ.ಕೃಷ್ಣಪ್ಪ, ಕೆ.ಎಸ್.ನಾಗೇಶ್, ವಿ.ಎಸ್.ಆನಂದಕುಮಾರ್, ಉಮಾಶಂಕರ್, ಎಂ.ಕೃಷ್ಣ, ಶಿವಾಜಿ, ಭಾಸ್ಕರ್ ನಾಯಕ್, ನಂಜುಂಡಸ್ವಾಮಿ, ಚೆಲುವರಾಜು, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕÀ ಎಂ.ಎನ್. ಚಂದ್ರಮೋಹನ್, ಡಿ.ಆರ್. ಸೋಮಶೇಖರ್ ಮತ್ತಿತರರು ಇದ್ದರು.

ಚೇಂಬರ್ ಆಫ್ ಕಾಮರ್ಸ್‍ನ ಸ್ಥಳೀಯ ಘಟಕದ ಅಧ್ಯಕ್ಷರಾದ ಅಮೃತ್‍ರಾಜ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಬಲಂ ಭೋಜಣ್ಣರೆಡ್ಡಿ ಅವರು ಪಾಲ್ಗೊಂಡು ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು. ಈ ಸಂದರ್ಭ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕುಶಾಲನಗರ ಒಳಚರಂಡಿ ಯೋಜನೆಯ ಕಾಮಗಾರಿ ಪೂರ್ಣ ಗೊಳಿಸಲು ಎರಡು ರೀತಿಯ ಅಡಚಣೆಗಳು ಉಂಟಾಗಿರುವದಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೈಸೂರು ವಿಭಾಗದ ಕಾರ್ಯಪಾಲಕ ಅಭಿಯಂತರ ಪ್ರಸನ್ನಮೂರ್ತಿ ಮಾಹಿತಿ ನೀಡಿದ್ದಾರೆ. ಅವರು ‘ಶಕ್ತಿ’ ಯೊಂದಿಗೆ ಮಾತನಾಡಿ, ಯೋಜನೆಗೆ ಸಂಬಂಧಿಸಿದಂತೆ ಯೋಜನೆಯ ಪರಿಷ್ಕøತ ಅಂದಾಜು ಪಟ್ಟಿ ಸರಕಾರಕ್ಕೆ ಕಳುಹಿಸಿದ್ದು ಇನ್ನೂ ಅನುಮೋದನೆ ಗೊಂಡಿಲ್ಲ.

ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಎರಡು ಕೋಟಿ ರೂ. ಗಳಿಗೂ ಮಿಕ್ಕಿ ಹಣ ಪಾವತಿಸಲು ಬಾಕಿ ಇರುವದಾಗಿ ತಿಳಿಸಿದ್ದಾರೆ. ಇದರೊಂದಿಗೆ ತ್ಯಾಜ್ಯ ಶುದ್ಧೀಕರಣ ಘಟಕದ ಸ್ಥಳವಕಾಶದ ಗೊಂದಲ ಕೂಡ ಕಾಮಗಾರಿ ಸ್ಥಗಿತಗೊಳ್ಳಲು ಕಾರಣವಾಗಿದೆ ಎಂದಿದ್ದಾರೆ. ತಾ. 14 ರಂದು ಮಡಿಕೇರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಅಲ್ಲಿ ಚರ್ಚಿಸಲಾಗುವದು ಎಂದಿದ್ದಾರೆ.