ಗೋಣಿಕೊಪ್ಪ ವರದಿ, ಜೂ. 12: ವಿದ್ಯಾರ್ಥಿ ಜೀವನದಲ್ಲಿಯೇ ಉದ್ಯೋಗ ಪೂರಕ ತರಬೇತಿ ನೀಡುವ ಮೂಲಕ ಪ್ಲೇಸ್‍ಮೆಂಟ್ ಸೆಲೆಕ್ಷನ್‍ನಲ್ಲಿ ಕೆಲಸ ದಕ್ಕಿಸಿಕೊಳ್ಳಲು ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಯೋಜನೆ ರೂಪಿಸಿಕೊಂಡಿದೆ.

ಇದರಂತೆ ಈ ವರ್ಷ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ 70 ವಿದ್ಯಾರ್ಥಿಗಳು ಓದು ಮುಗಿಸುವ ಮುನ್ನವೇ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

ಮೆಕಾನಿಕಲ್ಸ್, ಎಲೆಕ್ಟ್ರಿಕ್ ಅಯಿಂಡ್ ಕಮ್ಯೂನಿಕೇಶನ್, ಸಿವಿಲ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಆಯ್ಕೆ ಯಾಗಿದ್ದಾರೆ. ಸುಮಾರು 20 ಕಂಪೆನಿಗಳು ಸ್ಪರ್ಧೆಯ ಮೂಲಕ ಆಯ್ಕೆಯಲ್ಲಿ ತೊಡಗಿಕೊಂಡಿತ್ತು. ವಾರ್ಷಿಕವಾಗಿ ರೂ. 1 ರಿಂದ 4.5 ಲಕ್ಷದವರೆಗೂ ವೇತನ ಪ್ಯಾಕೇಜ್ ಘೋಷಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ.

ಪ್ರತೀ ವರ್ಷ ಈ ಕಾಲೇಜಿನಲ್ಲಿ ಪ್ಲೇಸ್‍ಮೆಂಟ್ ಹೆಸರಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಸಾಕಷ್ಟು ಕಂಪೆನಿಗಳು ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿದೆ.

ಈ ಬಾರಿ 6-8 ಸೆಮಿಸ್ಟರ್‍ವರೆಗಿನ ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿ ದ್ದಾರೆ. ಶಿಕ್ಷಣ ಮುಗಿದ ಕೂಡಲೇ ಉದ್ಯೋಗಕ್ಕೆ ಸೇರಿಕೊಂಡು ವೇತನ ಪಡೆಯುವಷ್ಟು ಬೆಳೆದು ನಿಲ್ಲುವಂತೆ ಮಾಡಿದ್ದಾರೆ.

6ನೇ ಸೆಮಿಸ್ಟರ್ ಮೂಲಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕೂಡ ಆಯ್ಕೆಯಾಗಿರುವದರಿಂದ ಮುಂದಿನ 1 ವರ್ಷದಲ್ಲಿ ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಿಕೊಳ್ಳಲಿದ್ದಾರೆ.

ಈಗಾಗಲೇ ಎಸ್‍ಎಲ್‍ಕೆ ಸಾಫ್ಟ್‍ವೇರ್, ಸಿಕ್ರೋನಿಕ್ಸ್, ಆಕ್ವಾ ಇನ್ಫೊಟೆಕ್, ಎಸ್‍ಬಿ ಎಂಟರ್‍ಪ್ರೈಸ್, ಯಂಗ್‍ಸ್ಟೊನ್ ಟೆಕ್ನೋಲಜೀಸ್, ಇಕ್ವಿಲೋಜಿಕ್ಸ್ ಸಾಫ್ಟ್‍ವೇರ್, ಎತನಾಸ್, ಕ್ಯೂ ಸ್ಪೈಡರ್ಸ್, ಹೆಚ್‍ಪಿ, ಫೇಸ್, ಸ್ಕಂದಾ ಮೆಷಿನ್‍ಟೂಲ್ಸ್, ಬಿಗ್‍ಫಿಕ್ಸ್ ಇ-ಕೇರ್, ಮಾನ್ವಿ ಟೆಕ್ನೋಲಜೀಸ್, ಕ್ಯೂವಾಕ್ ಹಾಗೂ ಕಾಲ್ ಇನ್ ಐಟಿ ಕಂಪೆನಿಗಳು ಆಯ್ಕೆ ಮಾಡಿಕೊಂಡಿವೆ.

ವಿದ್ಯಾರ್ಥಿಗಳನ್ನು ಪರಿಪೂರ್ಣ ಉದ್ಯೋಗಿಯಾಗಿ ಮಾರ್ಪಡಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಮೂಲಕ ಯೋಜನೆ ರೂಪಿಸಿಕೊಂಡಿದೆ.

ಬಹುತೇಕ ಕಾಲೇಜುಗಳಲ್ಲಿ ಉದ್ಯೋಗ ಸೇರುವ ಮುನ್ನ ವೇತನ ಪಡೆಯದೇ ನಡೆಸುವ ಇಂಟರ್‍ಶಿಪ್ ನಿರ್ವಹಣೆ, ಕಂಪೆನಿಗಳಲ್ಲಿ ದುಡಿಯುವ ಸಂದರ್ಭ ತಾನು ಪಡೆದ ಶಿಕ್ಷಣವನ್ನು ಹೇಗೆ ಬಳಸಿಕೊಳ್ಳಬೇಕು. ಯಾವ ರೀತಿ ದುಡಿಯಬೇಕು ಎಂಬ ಬಗ್ಗೆ ಕಲಿತಂತಾಗುತ್ತದೆ.

ಭಾಷಾ ಕೌಶಲ್ಯ ಹೆಚ್ಚಿಸಿಕೊಳ್ಳಲು ಸಾಫ್ಟ್‍ಸ್ಕಿಲ್ ಯೋಜನೆ ಜಾರಿಗೆ ತಂದಿದೆ. ಇಲ್ಲಿವರೆಗೆ ಸುಮಾರು 500 ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.

ಕಾಲೇಜಿನ ನಾಲ್ಕು ವಿಭಾಗದ ವಿದ್ಯಾರ್ಥಿಗಳನ್ನು ಪ್ಲೇಸ್‍ಮೆಂಟ್‍ನಲ್ಲಿ ಕೆಲಸ ಪಡೆದುಕೊಳ್ಳಲು ನಾವು ಯೋಜನೆ ರೂಪಿಸಿಕೊಂಡಿದ್ದೇವೆ. ಶಿಕ್ಷಣ ಸಂದರ್ಭವೇ ಉದ್ಯೋಗ ಲಭಿಸುತ್ತಿರುವದು ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೈರ್ಯ ನೀಡು ವಂತಾಗಿದೆ. ಹೆಚ್ಚು ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಂಡಿದ್ದಾರೆ ಎಂದು ಪ್ರಾಂಶುಪಾಲ ಡಾ. ಮಹಾಭಲೇಶ್ವರಪ್ಪ ಹೇಳುತ್ತಾರೆ.

ಕ್ಯಾಂಪಸ್ ಸೆಲೆಕ್ಷನ್‍ಗೂ ಮುನ್ನ ಕಾಲೇಜಿನಲ್ಲಿ ನೀಡುತ್ತಿರುವ ಪೂರ್ವ ತರಬೇತಿ ವಿದ್ಯಾರ್ಥಿಗಳು ಆಯ್ಕೆ ಯಾಗಲು ಪೂರಕವಾಗುತ್ತಿದೆ. ಕಾಲೇಜಿನಿಂದಲೇ ಇಂಟರ್ನ್‍ಶಿಪ್ ನೀಡುತ್ತಿರುವದು ವಿದ್ಯಾರ್ಥಿಗಳಿಗೆ ಕೆಲಸ ಗಿಟ್ಟಿಸಿಕೊಳ್ಳಲು ಸಹಕಾರಿ ಯಾಗುತ್ತಿದೆ ಎಂದು ಪ್ಲೇಸ್‍ಮೆಂಟ್ ಅಧಿಕಾರಿ ಡಿ. ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.