ಮಡಿಕೇರಿ, ಜೂ. 12: ತಾ. 14 ರಂದು ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯಿತಿಯ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದೆ. ಆ ದಿಸೆಯಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಅರ್ಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳ, ಸಾರ್ವಜನಿಕ ಉದ್ದಿಮೆಗಳ, ಖಾಸಗಿ ಕಂಪೆನಿಗಳ, ಶಾಲಾ-ಕಾಲೇಜುಗಳ (ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು), ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್‍ಗಳ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಖಾನೆಗಳ, ಉಳಿದ ಕೈಗಾರಿಕಾ ಸಂಸ್ಥೆಗಳ ಹಾಗೂ ಸಹಕಾರಿ ರಂಗದ ಸಂಘ-ಸಂಸ್ಥೆಗಳ ಅರ್ಹ ಮತದಾರ ನೌಕರರಿಗೆ ಹಾಗೂ ಎಲ್ಲಾ ವ್ಯವಹಾರಿಕ ಸಂಸ್ಥೆಗಳ, ಔದ್ಯಮಿಕ ಸಂಸ್ಥೆಗಳ ಮತ್ತು ಇನ್ನಿತರ ಸಂಸ್ಥೆಗಳ ಖಾಯಂ ಅಥವಾ ದಿನಗೂಲಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ಸೀಮಿತವಾದಂತೆ ತಾ. 14 ರಂದು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993 ರ ನಿಯಮ 114ನ್ನು ಓದಿಕೊಂಡಂತೆ, ಪ್ರಜಾಪ್ರತಿನಿಧಿ ಕಾಯೆ 1954ರ ಸೆಕ್ಷನ್ 135 ಬಿ ರಡಿಯಲ್ಲಿ ವೇತನ ಸಹಿತ ರಜೆ ಘೋಷಿಸಿ, ಸರ್ಕಾರ ಆದೇಶಿಸಿದೆ. ಚುನಾವಣೆ ನಡೆಯುವ ತಾಲೂಕು ಮತ್ತು ಮತದಾನ ನಡೆಯಲಿರುವ ಕ್ಷೇತ್ರದ ಸಂಖ್ಯೆ ಮತ್ತು ಹೆಸರು:-ಮಡಿಕೇರಿ ತಾಲೂಕಿನ ಮದೆ-2, ವೀರಾಜಪೇಟೆ ತಾಲೂಕಿನ ಕಣ್ಣಂಗಾಲ-1.