ವೀರಾಜಪೇಟೆ, ಜೂ.12: ಕಳೆದ 2011ರ ಜನಗಣತಿಯ ಹಾಗೂ 2018ರ ಮೇ ತನಕದ ಮತದಾರರ ಪಟ್ಟಿಯ ಪರಿಷ್ಕರಣೆಯಂತೆ 18ಸ್ಥಾನಗಳಿಗೆ ವಾರ್ಡ್ ಪ್ರಕಾರ ಮೀಸಲಾತಿಯನ್ನು ಪಟ್ಟಣ ಪಂಚಾಯಿತಿ ನೋಟೀಸ್ ಬೋರ್ಡ್‍ನಲ್ಲಿ ಪ್ರಕಟಿಸಲಾಗಿದೆ. ಮೀಸಲಾತಿಯ ಪ್ರಕಟಣೆಯಂತೆ ಸಲಹೆ ಆಕ್ಷೇಪಣೆ ಸಲ್ಲಿಸುವವರು ತಾ. 21ರ ಸಂಜೆ 5ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎನ್.ಪಿ.ಹೇಮ್ ಕುಮಾರ್ ತಿಳಿಸಿದ್ದಾರೆ.

ಮತದಾರರ ಪರಿಷ್ಕøತ ಕರಡು ಪಟ್ಟಿ ಸಿದ್ಧ

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಚುನಾವಣೆಗಾಗಿ ಮತದಾರರ ಪರಿಷ್ಕøತ ಕರಡು ಪ್ರತಿ ಸಿದ್ಧವಾಗಿದ್ದು ಇದನ್ನು ಕೂಡ ಪಟ್ಟಣ ಪಂಚಾಯಿತಿಯ ನೋಟೀಸ್ ಬೋರ್ಡ್‍ನಲ್ಲಿ ಪ್ರಕಟಿಸಲಾಗಿದೆ. ಇದರ ಕುರಿತು ಆಕ್ಷೇಪಣೆ ಸಲ್ಲಿಸುವವರು ತಾ.17 ರೊಳಗೆ ಪಟ್ಟಣ ಪಂಚಾಯಿತಿಯ ಕಚೇರಿಗೆ ಸಲ್ಲಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.