ಗುಡ್ಡೆಹೊಸೂರು, ಜೂ. 12: ಕಾವೇರಿ ನದಿ ದಡದಲ್ಲಿ ಮತ್ತು ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಗಿಡ ನೆಡುವದರೊಂದಿಗೆ ಶುಚಿತ್ವ ಕಾಪಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಎರಡು ದಿನಗಳಿಂದ ವಿವಿಧ ಭಾಗಗಳಲ್ಲಿ ಗಿಡಗಳನ್ನು ನೆಟ್ಟು ಸಭೆ-ಸಮಾರಂಭ ನಡೆಸಲಾಯಿತು. ಗುಡ್ಡೆಹೊಸೂರಿಗೆ ಜಾಥಾ ಆಗಮಿಸಿ ಗುಡ್ಡೆಹೊಸೂರು ವೃತ್ತದ ಬಳಿ ಸಮಾರಂಭ ನಡೆಯಿತು. ಕಾಲ್ನಡಿಗೆಯಲ್ಲಿ ಮತ್ತು ದ್ವಿಚಕ್ರ ವಾಹನದ ಮೂಲಕ ಜಾಥಾ ನಡೆಸಲಾಯಿತು. ಭಾರೀ ಮಳೆಯ ನಡೆವೆಯು ಜಾಥಾ ಮುಂದುವರಿಯಿತು.

ಕಾರ್ಯಕ್ರಮ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಡೆಯಿತು. ಜಾಥಾದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಆರ್ಟ್ ಆಫ್ ಲಿವಿಂಗ್‍ನ ಸದಸ್ಯರು, ಗ್ರೀನ್ ಸೀಟಿ ಕೊಡಗು ಫೋರಂನ ಸದಸ್ಯರು, ಕೊಡವ ಜಾವ ಯಜ್ಡಿಯ ಮೋಟಾರ್ ಸೈಕಲ್ ಸಂಸ್ಥೆ ಬೆಂಗಳೂರಿನ ಸದಸ್ಯರು ಹಾಜರಿದ್ದರು. ಜಾಥಾ ಆನೆಕಾಡಿಗೆ ತೆರಳಿ ವಿವಿಧ ರೀತಿಯ ಕಾಡು ಮರಗಳ ಬೀಜಗಳನ್ನು ಕಾಡಿನಲ್ಲಿ ಬಿತ್ತುವ ಕಾರ್ಯ ನಡೆಸಿದರು. ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಗಿಡಗಳನ್ನು ನೆಟ್ಟರು.