ಕೂಡಿಗೆ, ಜೂ. 12 : ಕೂಡಿಗೆ ಸೈನಿಕ ಶಾಲೆಯಲ್ಲಿ ಕಳೆದ ಆರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ 10 ಮಂದಿ ಡಿ ದರ್ಜೆಯ ನೌಕರರನ್ನು ಕೆಲಸದಿಂದ ತೆಗೆದ ಹಿನ್ನೆಲೆಯಲ್ಲಿ ಹತ್ತು ಮಂದಿ ನೌಕರರು ಮತ್ತು ಅವರ ಕುಟುಂಬಸ್ಥರು ಸೈನಿಕ ಶಾಲೆಯ ಎದುರು ನಡೆಸುತ್ತಿರುವ ಅಮರಣಾಂತರ ಉಪವಾಸ ಸತ್ಯಾಗ್ರಹ ಎರಡನೇ ದಿನವೂ ಮುಂದು ವರೆಯಿತು.

ಈಗ ಹುದ್ದೆಯಿಂದ ವಜಾಮಾಡಿರುವ ಹತ್ತು ನೌಕರರನ್ನು ನಿಯಮಾನುಸಾರವಾಗಿ ಮರು ನೇಮಕ ಮಾಡಿ, ಸೇವಾ ಭದ್ರತೆ ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್ ಒತ್ತಾಯಿಸಿದರು. ಸ್ಥಳೀಯ ಮುಖಂಡರಾದ ಕೆ.ವರದ, ಗಣಿಪ್ರಸಾದ್, ಶಶಿಕಿರಣ್, ಮುಳ್ಳುಸೋಗ ಗ್ರಾಮ ಪಂಚಾಯ್ತಿ ಸದಸ್ಯ ಅರುಣ್‍ಚಂದ್ರ, ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರು, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ವೆಂಕಟೇಶ್‍ಪೂಜಾರಿ ಇದ್ದರು.