ಶನಿವಾರಸಂತೆ, ಜೂ. 12: ಶನಿವಾರಸಂತೆ - ಕೊಡ್ಲಿಪೇಟೆ ವಿಭಾಗದ ಮುಸ್ಲಿಂ ಜನಾಂಗದ ರಂಜಾನ್ ಹಬ್ಬದ ಪ್ರಯುಕ್ತ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.

ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ವೃತ್ತ ನಿರೀಕ್ಷಕ ನಂಜುಂಡೇಗೌಡ ಮಾತನಾಡಿ, ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಶಾಂತಿ ಸೌಹಾರ್ಧತೆಯಿಂದ ಆಚರಿಸಬೇಕು. ಹಬ್ಬದ ದಿನದಂದು ಮೆರವಣಿಗೆ ಇದ್ದಲ್ಲಿ ಮುಂಚಿತವಾಗಿ ಪೊಲೀಸ್ ಇಲಾಖೆ ವತಿಯಿಂದ ಅನುಮತಿ ಪಡೆಯಬೇಕು ಎಂದರು.

ಸಭೆಯಲ್ಲಿ ಶನಿವಾರಸಂತೆ ಜಾಮಿಯಾ ಮಸೀದಿಯ ಅಧ್ಯಕ್ಷ ಅಕ್ಮಲ್ ಪಾಶ, ಗುಡುಗಳಲೆ ಮಸೀದಿ ಅಧ್ಯಕ್ಷ ಹಸೈನಾರ್, ಕೊಡ್ಲಿಪೇಟೆ ಜಾಮಿಯಾ ಮಸೀದಿಯ ಅಧ್ಯಕ್ಷ ಅಸ್ಲಾಂ, ಹ್ಯಾಂಡ್‍ಪೋಸ್ಟ್ ಮಸೀದಿಯ ಅಧ್ಯಕ್ಷ ಸುಲೈಮಾನ್, ಶನಿವಾರಸಂತೆ ಹೋಬಳಿ ಜೆ.ಡಿ.ಎಸ್. ಅಧ್ಯಕ್ಷ ಎಂ.ಎ. ಆದಿಲ್ ಪಾಶ, ಶನಿವಾರಸಂತೆ ಹೋಬಳಿ ಆರ್.ಎಸ್.ಎಸ್. ಸಂಚಾಲಕ ಯತೀಶ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರತಾಪ್, ಹಂಡ್ಲಿ ಗ್ರಾ.ಪಂ. ಅಧ್ಯಕ್ಷ ಸಂದೀಪ್, ನಿಡ್ತ ಗ್ರಾ.ಪಂ. ಅಧ್ಯಕ್ಷ ಮುಸ್ತಫಾ, ಕೊಡ್ಲಿಪೇಟೆ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಮಧು, ಪ್ರಮುಖರಾದ ಡಿ.ಪಿ. ಬೋಜಪ್ಪ, ಕೆ.ಎಸ್. ಚೆನ್ನಬಸಪ್ಪ, ನಟೇಶ್, ಹನೀಫ್, ಅಬ್ಬಾಸ್, ಎ.ಎಸ್.ಐ. ಗಳಾದ ಗೋವಿಂದ್, ಚೆಲುವರಾಜ್, ಸಿಬ್ಬಂದಿಗಳಾದ ಸಂತೋಷ್, ಶಫೀಕ್, ಚೆನ್ನಕೇಶವ, ಶಿವಲಿಂಗಪ್ಪ, ಇತರರು ಉಪಸ್ಥಿತರಿದ್ದರು. ಪೊಲೀಸ್ ಠಾಣಾಧಿಕಾರಿ ಎನ್. ಆನಂದ್ ಸ್ವಾಗತಿಸಿ, ವಂದಿಸಿದರು.