ಕೂಡಿಗೆ, ಜೂ. 13: ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ಸೇವೆಯಿಂದ ತೆಗೆದು ಹಾಕಿದ್ದನ್ನು ವಿರೋಧಿಸಿ ಕೂಡಿಗೆ ಸೈನಿಕ ಶಾಲೆಯ ಡಿ ದರ್ಜೆ ನೌಕರರು ಕೈಗೊಂಡಿದ್ದ ಆಮರಣಾಂತರ ಉಪವಾಸ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಸೈನಿಕ ಶಾಲೆಯ ಪ್ರಾಂಶುಪಾಲರೊಂದಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ, ಬಿಜೆಪಿ ಮುಖಂಡ ವರದ ಅವರು ನಡೆಸಿದ ಮಾತುಕತೆಯ ಪರಿಣಾಮ ಆಮರಣಾಂತ ಉಪವಾಸ ನಡೆಸುತ್ತಿದ್ದ ನೌಕರರು ಸತ್ಯಾಗ್ರಹ ಹಿಂತೆಗೆದುಕೊಂಡರು.

ಪ್ರಾಂಶುಪಾಲರು ದಿನಗೂಲಿ ನೌಕರಿಯ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಕಲ್ಪಿಸಿದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಬಿಜೆಪಿ ಮುಖಂಡರಾದ ಗಣಿಪ್ರಸಾದ್, ಕುಮಾರಪ್ಪ, ಕೆ.ಕೆ.ಭೋಗಪ್ಪ, ಮನುನಂಜುಂಡ, ಶಶಿಕಿರಣ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸಾವಿತ್ರಿರಾಜು, ಶೇಖರ್ ಮುಂತಾದವರು ಇದ್ದರು.