ಮಡಿಕೇರಿ, ಜೂ. 13: ಕುಶಾಲನಗರ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ 16 ವಾರ್ಡ್‍ಗಳ ಮತದಾರರ ಪಟ್ಟಿ ಹಾಗೂ ವಾರ್ಡ್‍ವಾರು ಮೀಸಲಾತಿ ಪಟ್ಟಿಯನ್ನು ಕುಶಾಲಗರ ಪಟ್ಟಣ ಪಂಚಾಯಿತಿಯ ಕಚೇರಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಸಾರ್ವಜನಿಕರು ಖುದ್ದಾಗಿ ಬಂದು ಪರಿಶೀಲಿಸಿ ತಮ್ಮ ಆಕ್ಷೇಪಣೆ ಗಳೇನಾದರೂ ಇದ್ದಲ್ಲಿ ಕ್ರಮವಾಗಿ ತಾ. 17 ಮತ್ತು ತಾ. 20 ರ ಸಂಜೆ 5 ಗಂಟೆಯೊಳಗೆ ಈ ಕಚೇರಿಗೆ ಲಿಖಿತವಾಗಿ ಸಲ್ಲಿಸುವದು. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸ ಲಾಗುವದಿಲ್ಲ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.