ಸೋಮವಾರಪೇಟೆ, ಜೂ. 13: ಇಲ್ಲಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯನ್ನು ತಕ್ಷಣವೇ ತೋಳೂರು ಶೆಟ್ಟಳ್ಳಿ ಪ್ರಸಾದ್ ಪ್ರೌಢಶಾಲೆಯ ಕಟ್ಟಡಕ್ಕೆ ಸ್ಥಳಾಂತರಿ¸ Àಬೇಕು ಎಂದು ಆಗ್ರಹಿಸಿರುವ ತೋಳೂರುಶೆಟ್ಟಳ್ಳಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಟಿ. ಪರಮೇಶ್, ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗು ವದು ಎಂದು ಎಚ್ಚರಿಸಿದ್ದಾರೆ.

ಪತ್ರಿಕಾಕೋಷ್ಠಿಯಲ್ಲಿ ಮಾತ ನಾಡಿದ ಅವರು, ಸೋಮವಾರ ಪೇಟೆಗೆ ವಸತಿ ಶಾಲೆ ಮಂಜೂ ರಾಗಿದ್ದು, ಸೂಕ್ತ ಕಟ್ಟಡದ ಕೊರತೆ ಯಿಂದ ಪಟ್ಟಣದ ಮೆಟ್ರಿಕ್‍ಪೂರ್ವ ಬಾಲಕಿಯರ ಹಾಸ್ಟೆಲ್‍ನಲ್ಲಿ, ವಸತಿ ಶಾಲೆಯ 60 ವಿದ್ಯಾರ್ಥಿಗಳು ಒಂದು ವರ್ಷದಿಂದ ನೆಲೆಸಿದ್ದಾರೆ. ಇಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಇನ್ನು 8 ದಿನಗಳ ಒಳಗೆ ಪ್ರಸಾದ್ ಪೌಢಶಾಲೆಯ ಕಟ್ಟಡಕ್ಕೆ ವಸತಿ ಶಾಲೆಯನ್ನು ಸ್ಥಳಾಂತರ ಮಾಡಬೇಕು. ತಪ್ಪಿದಲ್ಲಿ ತೋಳೂರುಶೆಟ್ಟಳ್ಳಿ ಸುತ್ತಲಿನ ಗ್ರಾಮಸ್ಥರ ಸಹಕಾರದೊಂದಿಗೆ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದರು.

ಈ ಹಿಂದೆ ತೋಳೂರುಶೆಟ್ಟಳ್ಳಿಯ 13 ಎಕರೆ ಸರ್ಕಾರಿ ಜಾಗದ ಕಟ್ಟಡದಲ್ಲಿ ಕನ್ನಡ ಮಾಧ್ಯಮದ ಅನುದಾನಿತ ಪ್ರಸಾದ್ ಪ್ರೌಢಶಾಲೆ ನಡೆಯುತ್ತಿತ್ತು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಕಾರಣ ಶಾಲೆಯನ್ನು ಮುಚ್ಚಲಾಯಿತು. ನಂತರ ಅದೇ ಕಟ್ಟಡದಲ್ಲಿ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯನ್ನು ಪ್ರಾರಂಭಿಸಲು ಸರ್ಕಾರ 30 ಲಕ್ಷ ರೂ. ಹಣವನ್ನು ಖರ್ಚು ಮಾಡಿ ಕಟ್ಟಡವನ್ನು ನವೀಕರಣಗೊಳಿಸಲಾಗಿದೆ. ಆದರೆ ವಸತಿ ಶಾಲೆಯನ್ನು ಅಲ್ಲಿಗೆ ಸ್ಥಳಾಂತರ ಮಾಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸೋಮವಾರಪೇಟೆಗೆ ಮಂಜೂರಾಗಿರುವ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯನ್ನು ತಕ್ಷಣ ತೋಳೂರುಶೆಟ್ಟಳ್ಳಿಯ ಪ್ರಸಾದ್ ಪೌಢಶಾಲಾ ಕಟ್ಟಡಕ್ಕೆ ಸ್ಥಳಾಂತರಿಸು ವಂತೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಶಿಫಾರಸ್ಸು ಮಾಡಿದ್ದಾರೆ. ಜಿ.ಪಂ.ನಲ್ಲೂ ಈ ಬಗ್ಗೆ ಮಂಜೂರಾತಿ ದೊರೆತಿದೆ. ಆದರೆ ಸಮಾಜ ಕಲ್ಯಾಣ ಇಳಾಖೆಯ ಕೆಲ ಅಧಿಕಾರಿಗಳ ಕುತಂತ್ರದಿಂದ ಕುಶಾಲನಗರಕ್ಕೆ ಸ್ಥಳಾಂತರ ಮಾಡಲು ಹುನ್ನಾರ ನಡೆಯುತ್ತಿದೆ. ಅಂತಹ ಪ್ರಯತ್ನಕ್ಕೆ ಅಧಿಕಾರಿಗಳು ಮುಂದಾದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ನಿರ್ದೇಶಕ ಕೆ.ಕೆ. ಸುಧಾಕರ್, ಗ್ರಾಮದ ಪ್ರಮುಖರುಗಳಾದ ಉಮೇಶ್, ಧರ್ಮಪ್ಪ, ಐ.ಜೆ. ಲತೀಶ್, ಟಿ.ಯು. ಧರ್ಮಪ್ಪ ಉಪಸ್ಥಿತರಿದ್ದರು.