ಮಡಿಕೇರಿ ಜೂ. 15 : ಮಡಿಕೇರಿ ನೆಹರು ಯುವ ಕೇಂದ್ರ, ಕೊಡಗು ಜಿಲ್ಲಾ ಮತ್ತು ವೀರಾಜಪೇಟೆ ಯುವ ಒಕ್ಕೂಟ ಹಾಗೂ ಪೊನ್ನಂಪೇಟೆ ನಿಸರ್ಗ ಯುವತಿ ಮಂಡಳಿ ಇದರ ಸಂಯುಕ್ತಾಶ್ರಯದಲ್ಲಿ ತಾ. 16 ರಂದು (ಇಂದು) ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ “ನೆರೆಹೊರೆ ಯುವಜನ ಸಂಸತ್ತು’’ ಕಾರ್ಯಕ್ರಮ ನಡೆಯಲಿದೆ.

ಪೊನ್ನಂಪೇಟೆ ಶ್ರೀ ರಾಮಕೃಷ್ಣ ಆಶ್ರಮ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಬೋದಸ್ವರೂಪಾನಂದ ಸ್ವಾಮೀಜಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ವೀರಾಜಪೇಟೆ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಶೀಲಾ ಬೋಪಣ್ಣ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಸದಾಶಿವ ಗೌಡ ಭಾಗವಹಿಸಲಿದ್ದಾರೆ.

ಅಂದು ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಆಶ್ರಮದ ಯೋಗ ಶಿಕ್ಷಕ ಮರಿಯ ಜಾನ್ ಯೋಗ ಪ್ರಾತ್ಯಕ್ಷತೆ ಮತ್ತು ‘ಉತ್ತಮ ಸಮಾಜಕ್ಕಾಗಿ ಯೋಗ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದು, ಹೊಸೂರು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಗೌಡ ‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳು’ ಕುರಿತು ಹಾಗೂ ಕೊಡಗು ಜಿಲ್ಲಾ ಪತ್ರಕರ್ತರ ವೇದಿಕೆ ಅಧ್ಯಕ್ಷರಾದ ಶ್ರೀಧರ್ ನೆಲ್ಲಿತ್ತಾಯ ‘ಸ್ವಚ್ಛತೆ ಭಾರತ ಆಂದೋಲನದಡಿಯಲ್ಲಿ ಗ್ರಾಮೀಣ ಯುವಜನತೆಯ ಪಾತ್ರ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.