ಕುಶಾಲನಗರ, ಜೂ. 15: ಕುಶಾಲನಗರ ಒಳಚರಂಡಿ ಯೋಜನೆ ಕಳಪೆ ಕಾಮಗಾರಿ ಹಾಗೂ ಕಾವೇರಿ ನದಿ ತಟದಲ್ಲಿ ನಿಯಮ ಬಾಹಿರವಾಗಿ ಕಾಮಗಾರಿ ನಡೆಸಿದ ಅಧಿಕಾರಿಗಳ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಲು ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ನಿರ್ಧರಿಸಿದ್ದಾರೆ.

ಕುಶಾಲನಗರದಲ್ಲಿ ತಾವರೆಕೆರೆ ಬಳಿಯಿಂದ ಗುಮ್ಮನಕೊಲ್ಲಿ ತನಕ ನದಿ ಬದಿಯಲ್ಲಿ ನೂರಾರು ಆಳುಗುಂಡಿಗಳನ್ನು ನಿರ್ಮಿಸಿದ್ದು ಈ ಕಾಮಗಾರಿ ಬಹುತೇಕ ಕಳಪೆ ಯಾಗಿದೆ. ಅಲ್ಲದೆ ನದಿ ಬದಿಯಿಂದ ನಿಯಮಾನುಸಾರ 33 ಮೀಟರ್ ದೂರದಲ್ಲಿ ಅಳವಡಿಸಬೇಕಾದ ಆಳುಗುಂಡಿಗಳನ್ನು ನದಿ ಹಾಗೂ ಕೆರೆ ತಟದಲ್ಲಿ ಅಳವಡಿಸಿರುವದು ಕಂಡುಬಂದಿದೆ. ಕುಶಾಲನಗರದ ಸಾಯಿ ಲೇಔಟ್ ಹಿಂಭಾಗ ನದಿ ಬದಿಯಲ್ಲಿ ಹಾಗೂ ಕೆಬಿ ಕಾಲೇಜು ಬಳಿ ಇದೀಗ ನದಿಯಲ್ಲಿ ಅಳವಡಿಸಿದ ಆಳು ಗುಂಡಿಗಳು ಪ್ರವಾಹಕ್ಕೆ ಕುಸಿದಿದ್ದು ಕೆಲವೆಡೆ ಕಾಮಗಾರಿ ಕೊಚ್ಚಿ ಹೋಗಿರುವ ದೃಶ್ಯ ಗೋಚರಿಸಿದೆ. ಕಳಪೆ ಗುಣಮಟ್ಟದ ಕಾಮಗಾರಿ ಇದಕ್ಕೆ ಕಾರಣವಾಗಿದ್ದು ಯಾಗಿದೆ. ಅಲ್ಲದೆ ನದಿ ಬದಿಯಿಂದ ನಿಯಮಾನುಸಾರ 33 ಮೀಟರ್ ದೂರದಲ್ಲಿ ಅಳವಡಿಸಬೇಕಾದ ಆಳುಗುಂಡಿಗಳನ್ನು ನದಿ ಹಾಗೂ ಕೆರೆ ತಟದಲ್ಲಿ ಅಳವಡಿಸಿರುವದು ಕಂಡುಬಂದಿದೆ. ಕುಶಾಲನಗರದ ಸಾಯಿ ಲೇಔಟ್ ಹಿಂಭಾಗ ನದಿ ಬದಿಯಲ್ಲಿ ಹಾಗೂ ಕೆಬಿ ಕಾಲೇಜು ಬಳಿ ಇದೀಗ ನದಿಯಲ್ಲಿ ಅಳವಡಿಸಿದ ಆಳು ಗುಂಡಿಗಳು ಪ್ರವಾಹಕ್ಕೆ ಕುಸಿದಿದ್ದು ಕೆಲವೆಡೆ ಕಾಮಗಾರಿ ಕೊಚ್ಚಿ ಹೋಗಿರುವ ದೃಶ್ಯ ಗೋಚರಿಸಿದೆ.