ಮಡಿಕೇರಿ, ಜೂ. 15: ಗೋವಾ ರಾಜ್ಯದ ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ 4 ಚಿನ್ನ ಹಾಗೂ 3 ಕಂಚಿನ ಪದಕ ದೊರಕಿದೆ ಎಂದು ಸಂಸ್ಥೆಯ ತರಬೇತುದಾರ ಬಿ.ಜಿ. ಲೋಕೇಶ್ ರೈ ತಿಳಿಸಿದ್ದಾರೆ.
ವಾಸ್ಕೋ ಟೆಕ್ವಾಂಡೊ ಅಕಾಡೆÀಮಿ, ಟೆಕ್ವಾಂಡೊ ಫೆಡರೇಶನ್ ಆಫ್ ಇಂಡಿಯಾ ಹಾಗೂ ಗೋವಾ ಟೆಕ್ವಾಂಡೊ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ, ರಾಷ್ಟ್ರಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ್ದ ತಾನಿಯಾ ಭವಾನಿ ಶಂಕರ್ ಎರಡು ಚಿನ್ನ ಹಾಗೂ ಒಂದು ಕಂಚಿನ ಪದಕ ಪಡೆದುಕೊಂಡಿದ್ದು, ಬೈಲೆರ ಪ್ರೊನಿಕ್ಷಾ ವಿಶ್ವನಾಥ್ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕ, ಬಿ.ಎಸ್. ದೃತಿ ಹೃಷಿಕಾ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಇವರೊಂದಿಗೆ ಪೂಜಾರಿರ ಬೃಹತ್ ಬೋಪಯ್ಯ, ಚಕ್ಕೇರ ಕಾರ್ಯಪ್ಪ, ಕಾರ್ತಿಕ್ ನಾಯಕ, ಚಂಡೀರ ಎಸ್. ಮೌರ್ಯ, ಮಿನ್ನಂಡ ಯಶಸ್ ಹಾಗೂ ಎಂ.ಪಿ. ಪ್ರೀತಮ್ ಸ್ಪರ್ಧಿಸಿದ್ದು, ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.