ಮಡಿಕೇರಿ, ಜೂ. 15: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಿಕೇರಿ ತಾಲೂಕಿನ ಮೂರ್ನಾಡು ವಲಯದ ಮರಗೋಡು ಕಾರ್ಯಕ್ಷೇತ್ರದ ಕಟ್ಟೆಮಾಡು ಗ್ರಾಮದ ಪರಂಬು(ಪಾವಳಕೇರಿ)ನಲ್ಲಿ ಶ್ರೀಮಹಾ ಮೃತ್ಯುಂಜಯ ಮಹದೇಶ್ವರ ದೇವಾಲಯದ ಜೀರ್ಣೋದ್ಧಾರ ನಡೆಯುತ್ತಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ. 2,50,000 ಡಿ.ಡಿ.ಯನ್ನು ದೇವಾಲಯ ಸಮಿತಿಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಲಾಯಿತು. ಯೋಜನಾ ಅಧಿಕಾರಿ ಸದಾಶಿವ ಗೌಡ, ಮೇಲ್ವಿಚಾರಕರಾದ ಸುಶೀಲ, ಸೇವಾ ಪ್ರತಿನಿಧಿ ಲತಾ ಮತ್ತು ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ವಿತರಣೆ ಮಾಡಿದರು.