ಮಡಿಕೇರಿ, ಜೂ. 15: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ, ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ನಗರಸಭೆ ಹಾಗೂ 3 ಪಟ್ಟಣ ಪಂಚಾಯಿತಿಗಳಾದ ಸೋಮವಾರ ಪೇಟೆ, ಕುಶಾಲನಗರ ಮತ್ತು ವೀರಾಜಪೇಟೆಗಳಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ವಸತಿ ಕಾರ್ಯ ಕರ್ತರ ಹುದ್ದೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ಖಾಲಿ ಇರುವ ಗ್ರಾ.ಪಂ.ಗಳ ಪಟ್ಟಿ ಇಂತಿದೆ:

ಮಡಿಕೇರಿ ತಾಲೂಕಿನ ಬೇಂಗೂರು, ಬಲ್ಲಮಾವಟಿ, ಚೆಂಬು, ಕೆ.ನಿಡುಗಣೆ, ಕುಂದಚೇರಿ, ಕುಂಜಿಲ, ಸಂಪಾಜೆ, ಕೊಣಂಜಗೇರಿ, ನರಿ ಯಂದಡ, ಎಮ್ಮೆಮಾಡು, ಬೆಟ್ಟಗೇರಿ. ಸೋಮವಾರಪೇಟೆ ತಾಲೂಕಿನ ಆಲೂರು-ಸಿದ್ದಾಪುರ, ಬ್ಯಾಡಗೊಟ್ಟ, ಬೆಟ್ಟದಳ್ಳಿ, ಬೇಳೂರು, ಚೆಟ್ಟಳ್ಳಿ, ದುಂಡಳ್ಳಿ, ದೊಡ್ಡಮಳ್ತೆ, ಗರ್ವಾಲೆ, ಹಂಡ್ಲಿ, ಕಂಬಿಬಾಣೆ, ನೇರುಗಳಲೆ, ಶನಿವಾರಸಂತೆ, ನಾಕೂರು-ಶಿರಂಗಾಲ, ನೆಲ್ಲಿಹುದಿಕೇರಿ, ಚೌಡ್ಲು, ಹರದೂರು, ನಂಜರಾಯ ಪಟ್ಟಣ, ಐಗೂರು, ಕಿರುಗಂದೂರು. ವೀರಾಜ ಪೇಟೆ ತಾಲೂಕಿನ ಅಮ್ಮತ್ತಿ, ಅರುವ ತ್ತೋಕ್ಲು, ಬಾಳೆಲೆ, ಬಿಟ್ಟಂಗಾಲ, ಬಿರು ನಾಣಿ, ಬಿ. ಶೆಟ್ಟಿಗೇರಿ, ಬಲ್ಯ ಮಂಡೂರು, ಚಂಬೆ ಬೆಳ್ಳೂರು, ದೇವರಪುರ, ಗೋಣಿಕೊಪ್ಪ, ಹೊಸೂರು, ಹುದಿಕೇರಿ, ಹಾಲುಗುಂದ, ಕದನೂರು, ಕಾನೂರು, ಮಾಯಮುಡಿ, ನಿಟ್ಟೂರು, ನಾಲ್ಕೇರಿ, ಪೊನ್ನಂಪೇಟೆ, ಪೊನ್ನಪ್ಪಸಂತೆ, ಸಿದ್ದಾಪುರ, ಟಿ. ಶೆಟ್ಟಿಗೇರಿ, ಆರ್ಜಿ, ಕೆ.ಬಾಡಗ, ಹಾತೂರು, ಕಿರುಗೂರು, ಕಾರ್ಮಾಡು. ಗ್ರಾಮ ಮಟ್ಟದಲ್ಲಿ ಗ್ರಾ.ಪಂ. ಕಚೇರಿಯಲ್ಲಿ ಕಾರ್ಯ ನಿರ್ವಹಿಸುವಂತೆ ಗ್ರಾಮೀಣ ಪುನ ರ್ವಸತಿ (ವಿಆರ್‍ಡಬ್ಲ್ಯು) ಕಾರ್ಯ ಕರ್ತರನ್ನು ಮಾಸಿಕ ಗೌರವಧನದ ಆಧಾರದಲ್ಲಿ ಆಯ್ಕೆ ಮಾಡಲಾಗುವದು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ರಿಗೆ ಮಾಸಿಕ ರೂ. 3 ಸಾವಿರಗಳ ಗೌರವಧನ ನೀಡಲಾಗುವದು. ಗ್ರಾಮೀಣ ಪುನರ್ವಸತಿ ಕಾರ್ಯ ಕರ್ತರ ಹುದ್ದೆಗೆ ಅರ್ಜಿ ಸಲ್ಲಿಸಲು 10 ನೇ ತರಗತಿ ಉತ್ತೀರ್ಣ-ಅನುತ್ತೀರ್ಣರಾಗಿರುವವರು ಅರ್ಜಿ ಸಲ್ಲಿಸಬಹುದು. 18 ರಿಂದ 45 ವರ್ಷದ ವಯೋಮಿತಿಯಲ್ಲಿರಬೇಕು ಮತ್ತು ಸ್ಥಳೀಯ ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಅಭ್ಯರ್ಥಿಯು ಮನೆ ಮನೆಗೆ ಭೇಟಿ ಮಾಡಿ ಸಮೀಕ್ಷೆ ಮಾಡುವದು ಹಾಗೂ ವಿವಿಧ ಸೌಲಭ್ಯ ಕೊಡಿಸಲು ಶಕ್ತರಾಗಿರಬೇಕು. ಆಸಕ್ತ ವಿಕಲಚೇತನರ ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ನ್ಯಾಯಾಲಯದ ಮುಂಭಾಗ, ಕೋಟೆ ಆವರಣ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿಂದ ಪಡೆದು ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಜುಲೈ 7 ರೊಳಗೆ ಕಚೇರಿಗೆ ತಲಪುವಂತೆ ಕಳುಹಿಸ ಬಹುದಾಗಿದೆ. ವಿವರಗಳಿಗೆ ಕಚೇರಿಯ ವಿಕಲಚೇತನರ ಸಹಾಯವಾಣಿ ದೂರವಾಣಿ: 08272-222830 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ದೇವರಾಜು ತಿಳಿಸಿದ್ದಾರೆ.