ಕುಶಾಲನಗರ, ಜೂ. 15: ಚುನಾವಣಾ ಮತದಾರರ ಪಟ್ಟಿಯಲ್ಲಿ ಪಟ್ಟಣ ಪಂಚಾಯ್ತಿಯ ಹಾಲಿ ಸದಸ್ಯರೊಬ್ಬರ ಹೆಸರನ್ನೇ ತೆಗೆದು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಕುಶಾಲನಗರ ಪಟ್ಟಣದ 1ನೇ ವಿಭಾಗದ ಮತದಾರ ಪಟ್ಟಿಯಲ್ಲಿ ಈ ಅವಾಂತರ ನಡೆದಿದ್ದು, ಸ್ಥಳೀಯ ಪಟ್ಟಣ ಪಂಚಾಯ್ತಿ 13 ವಾರ್ಡ್ನ ಸದಸ್ಯ ಕೆ. ಪ್ರಮೋದ್ ಮುತ್ತಪ್ಪ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಉಳಿದಂತೆ ಅವರ ಕುಟುಂಬ ಸದಸ್ಯರ ಹೆಸರು ಮಾತ್ರ ಕಂಡುಬಂದಿದೆ.
ಈ ರೀತಿಯ ಅವಾಂತರಗಳು ಪಟ್ಟಿಯಲ್ಲಿ ಕಂಡುಬಂದಿದ್ದು ತಕ್ಷಣ ಸರಿಪಡಿಸುವಂತೆ ನಾಗರೀಕರು ಚುನಾವಣಾ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.