ನಾಪೆÉÇೀಕ್ಲು, ಜೂ. 15: ಸಮೀಪದ ಪೇರೂರು ಗ್ರಾಮದ ಮಚ್ಚೂರವಾಡೆ ಮಂದ್ ಮತ್ತು ಇಗ್ಗುತ್ತಪ್ಪ ದೇವಳ ರಸ್ತೆಯು ತೀರಾ ಹದಗೆಟ್ಟಿದ್ದು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ದುರಸ್ತಿಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗು ವದು ಎಂದು ಗ್ರಾಮಸ್ಥರಾದ ಪಾಲೆಯಡ ಸಭಿತ ಚಿಣ್ಣಪ್ಪ, ಕೈಬುಲಿರ ಪ್ರಕಾಶ್ ಈರಪ್ಪ ಎಚ್ಚರಿಸಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರಸ್ತೆ ದುಸ್ಥಿತಿ ಬಗ್ಗೆ 20 ವರ್ಷದಿಂದ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರೂ, ಯಾವದೇ ಸ್ಪಂದನ ದೊರೆತಿಲ್ಲ. ಜನಪ್ರತಿನಿಧಿಗಳು ಚುನಾವಣೆ ಸಮೀಪಿಸಿದಾಗ ಈ ರಸ್ತೆಯನ್ನು ಕಾಂಕ್ರೀಟಿಕರಿಸಲಾಗುವದು, ಡಾಮರೀಕರಣ ಮಾಡಲಾಗುವದು ಎಂದು ಪೆÇಳ್ಳು ಭರವಸೆ ನೀಡಿ ತಮ್ಮ ಕಾರ್ಯ ಸಾಧಿಸುತ್ತಾ ಬಂದಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಓಡಾಡಲು ಸಾಧ್ಯವೇ ಇಲ್ಲ. ವಿದ್ಯುತ್ ಸರಬರಾಜು ಅಂತೂ ಕನಸಿನ ಮಾತು. ಸೀಮೆಎಣ್ಣೆ ಕೂಡ ಸಿಗದ ಕಾರಣ ಈ ವ್ಯಾಪ್ತಿಯ ಜನ ಕತ್ತಲೆಯಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಸಂಬಂಧಿಸಿವರು ಕೂಡಲೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.

ಗೋಷ್ಠಿಯಲ್ಲಿ ಬೊಳ್ಯಪಂಡ ನಂದ ಕರುಂಬಯ್ಯ, ಕುಂಡ್ಯೋಳಂಡ ಸಂಪತ್ ಇದ್ದರು.