ಮಡಿಕೇರಿ, ಜೂ. 16: ಮೇಕೇರಿಯ ಕಿಝರ್ ಜುಮ್ಮಾ ಮಸೀದಿ ಆಡಳಿತ ಮಂಡಳಿಯ ಮುಂದಿನ 3 ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಎಂ.ಕೆ. ಸಲೀಂ ಹಾಗೂ ಉಪಾಧ್ಯಕ್ಷರಾಗಿ ಎಂ.ಯು. ಹನೀಫ್, ಗೌರವ ಅಧ್ಯಕ್ಷರಾಗಿ ಎಂ.ಜೆ. ಹಸನ್ ಭಾಷ ಆಯ್ಕೆ ಆಗಿದ್ದಾರೆ.

ಇತ್ತೀಚೆಗೆ ನಡೆದ ವಾರ್ಷಿಕ ಮಹಾಭೆಯಲ್ಲಿ ಸರ್ವಸದಸ್ಯರ ಸಮ್ಮುಖದಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದ್ದು, ಕಾರ್ಯದರ್ಶಿಯಾಗಿ ಎಂ.ಈ. ಅಮೀರ್, ಎಂ.ಎಲ್. ರಹೀಮ್, ಮೊಹಮ್ಮದ್ ಹ್ಯಾರೀಸ್, ಖಜಾಂಚಿಯಾಗಿ ಸೈಯದ್ ಜಮುರುದ್ದೀನ್, ಉಪ ಕಾರ್ಯದರ್ಶಿಯಾಗಿ ಎಂ.ಯು. ರಫೀಕ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಕೆ.ಪಿ. ಹ್ಯಾರಿಸ್, ಪಯ್ಯತಡ್ಕ ಇಬ್ರಾಹಿಂ, ಅಬ್ದುಲ್ ಗಫಾರ್, ಟಿ.ಯಂ. ಉಸ್ಮಾನ್, ಎಂ.ಎಸ್. ರಫೀಕ್, ಎಂ.ಐ. ಅಬೂಬಕರ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಹಮೀದ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು.