ಸುಂಟಿಕೊಪ್ಪ, ಜೂ.16: ಕೂರ್ಗ್‍ಹಳ್ಳಿ ತೋಟದ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬರೆಗೆ ಡಿಕ್ಕಿಹೊಡೆದ ಪರಿಣಾಮ ಚಾಲಕ ಸೇರಿದಂತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಮಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಟೊಯೋಟಾ ಇಟಿಯೋಸ್ (ಕೆಎ19ಎಎ2358) ಕಾರು ಕೂರ್ಗ್‍ಹಳ್ಳಿ ತೋಟದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬರೆಗೆ ಅಪ್ಪಳಿಸಿದೆ. ವಾಹನ ಸಂಪೂರ್ಣ ಜಖಂಗೊಂಡಿದ್ದು ಪ್ರಯಾಣಿಸುತ್ತಿದ್ದ ಚಾಲಕ, ಮಹಿಳೆಯೋರ್ವರ ಕಾಲು ಮುರಿತಗೊಂಡಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ, ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರವi ಕೈಗೊಂಡಿದ್ದಾರೆ.