ಸೋಮವಾರಪೇಟೆ,ಜೂ.16:ಕಳೆದ ಮೇ 31ರಂದು ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಗಣೇಶ್ ಅವರ ಕುಟುಂಬಕ್ಕೆ ಉದ್ಯಮಿಗಳು ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ರೂ. 20 ಸಾವಿರ ವೈಯುಕ್ತಿಕ ನೆರವು ನೀಡಿದ್ದಾರೆ.

ಮೃತರ ಮನೆಗೆ ತೆರಳಿ ಪತ್ನಿ ಸವಿತ ಅವರಿಗೆ ಸಾಂತ್ವಾನ ಹೇಳಿದ ರವೀಂದ್ರ ಅವರು, ಮುಂದಿನ ದಿನಗಳಲ್ಲಿ ಮನೆಯಲ್ಲಿಯೇ ಸ್ವ ಉದ್ಯೋಗ ಕೈಗೊಳ್ಳಲು ಟೈಲರಿಂಗ್ ಯಂತ್ರ ನೀಡುವದಾಗಿ ತಿಳಿಸಿ ಧೈರ್ಯ ತುಂಬಿದರು. ಇದರೊಂದಿಗೆ ಮಕ್ಕಳ ಆರೋಗ್ಯ ಹಾಗೂ ಮೂರನೇ ಮಗಳ ವಿದ್ಯಾಭ್ಯಾಸಕ್ಕೂ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು.