ಮಡಿಕೇರಿ, ಜೂ. 16: ಹನಫಿ ಮುಸ್ಲಿಂ ಬಾಂಧವರು ಇಂದು ಈದುಲ್ ಫಿತರ್ ಹಬ್ಬವನ್ನು ಸಡಗರದಿಂದ ಆಚರಿಸಿದರು. ಮಾರುಕಟ್ಟೆ ಬಳಿ ಇರುವ ಜಾಮೀಯಾ ಮಸೀದಿ, ಮಕ್ಕಾ ಮಸೀದಿ, ಮದೀನ ಮಸೀದಿ ಲಷ್ಕರ್ ಹಾಗೂ ಅಹ್ಮದೀಯ ಮಸೀದಿಗಳಲ್ಲಿ ಈದುಲ್ ಫಿತರ್ ಪ್ರಯುಕ್ತ ವಿಶೇಷ ಪ್ರಾರ್ಥನೆ, ಧರ್ಮೋಪದೇಶ ನೆರವೇರಿತು. ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿ ಕೊಂಡರು. ಜಾಮೀಯಾ ಮಸೀದಿ ಯಲ್ಲಿ ಧರ್ಮಗುರು ಮೌಲಾನಾ ಅಸ್ಲಾಂ ಮಿಸ್ಬಾಯಿ, ಮಕ್ಕಾ ಮಸೀದಿಯಲ್ಲಿ ಅಬ್ದುಲ್ ಹಕೀಂ, ಮದೀನ ಮಸೀದಿಯಲ್ಲಿ ಅಬ್ದುಲ್ ಖಯ್ಯುಂ, ಅಹ್ಮದೀಯ ಜಮಾಅತ್‍ನಲ್ಲಿ ಹಾಫಿಝ್ ರಫೀಕ್ ಉಜ್ಜಮಾ ಇವರುಗಳ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು.ವೀರಾಜಪೇಟೆ : ಮುಸ್ಲಿಂ ಬಾಂಧವರು ಇಂದು ಈದುಲ್ ಪಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ನಗರದ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನಡೆಯಿತು. ಬೆಳಿಗ್ಗೆಯಿಂದಲೇ ನಮಾಝ್ ಹಾಗೂ ಖುತ್‍ಬಾ ಪ್ರವಚನ ನಡೆಯಿತು. ನಗರದ ಮುಖ್ಯರಸ್ತೆಯ ಶಾಫೀ ಜುಮಾ ಮಸೀದಿಯಲ್ಲಿ ಧಾರ್ಮಿಕ ಗುರುಗಳಾದ ಮೌ||.ಖಲೀಲ್ ಫೈಝಿ ಇರ್ಫಾನಿ, ಗಡಿಯಾರ ಕಂಬದ ಬಳಿಯ ಮುರುಡೇಶ್ವರ್ ಜಮಾಅತ್ ಬಾದ್‍ಶಾ ಮಸೀದಿಯಲ್ಲಿ ಮೌ||.ಮಖ್‍ಸೂದ್, ಖಾಸಗಿ ಬಸ್ ನಿಲ್ದಾಣದಲ್ಲಿನ ಶಾದುಲಿ ಜುಮಾ ಮಸೀದಿಯಲ್ಲಿ ನೌಷಾದ್ ದಾರಿಮಿ ಜುಮಾ ಪ್ರವಚನ ಹಾಗೂ ನಮಾಝ್‍ಗೆ ನೇತೃತ್ವ ವಹಿಸಿದ್ದರು.

ಗೋಣಿಕೊಪ್ಪ ರಸ್ತೆಯ ವಿದ್ಯಾನಗರದ ಬೈಟ್ ಕ್ಯಾಂಪಸ್‍ನ ಇಮಾಮ್ ಮುಸ್ಲಿಂ ಜುಮಾ ಮಸೀದಿಯಲ್ಲಿ ಮೌ|| ಅಬ್ದುಲ್‍ರೆಹಮಾನ್ ಅಝ್‍ಹರಿ, ಮಲಬಾರ್ ರಸ್ತೆಯ ಸಲಫಿ ಜುಮಾ ಮಸೀದಿಯಲ್ಲಿ ಮೌ||.ಮುನೀರ್ ಶರಫಿಯವರ ನೇತೃತ್ವದಲ್ಲಿ ಜುಮಾ ಪ್ರವಚನ ನಡೆಯಿತು.

ಹನಫಿ ಮುಸಲ್ಮಾನರು ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿದರು. ನಗರದ ಅಪ್ಪಯ್ಯಸ್ವಾಮಿ ರಸ್ತೆಯ ಜಾಮಿಯಾ ಮಸೀದಿಯಲ್ಲಿ ಮೌ||.ಗುಲ್‍ಶದ್ ಅಹಮದ್, ಬಂಗಾಳಿ ಬೀದಿಯ ಮಸ್ಜಿದ್-ಎ-ಅಝಂನಲ್ಲಿ

(ಮೊದಲ ಪುಟದಿಂದ) ಮೌ||.ಸಿರಾಜುದ್ದೀನ್, ಸುಣ್ಣದಬೀದಿಯ ಮದೀನಾ ಮಸೀದಿಯಲ್ಲಿ ಮೌ||.ಮುಝಮ್ಮಿಲ್ ಪ್ರವಚನ ನೀಡಿದರು. ನಂತರ ಸಮುದಾಯ ಬಾಂಧವರು ಮೆರವಣಿಗೆ ಮೂಲಕ ಖಬರ ಸ್ಥಾನಕ್ಕೆ ತೆರಳಿ ಅಗಲಿದ ಹಿರಿಯರಿಗೆ ಗೌರವ ಸಲ್ಲಿಸಿದರು.

ಶನಿವಾರಸಂತೆ

ಪಟ್ಟಣದ ಜಾಮೀಯಾ ಮಸೀದಿ, ತ್ಯಾಗರಾಜ ಕಾಲೋನಿಯ ಈದ್ಗಾ ಮಸೀದಿ ಹಾಗೂ ಗುಂಡೂರಾವ್ ಬಡಾವಣೆಯ ಮದೀನಾ ಮಸೀದಿಗಳಲ್ಲಿ ವಿಶೇಷ ನಮಾಝ್ ಹಾಗೂ ಪ್ರಾರ್ಥನೆ ನಡೆದವು. ಮೂರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ಸೇರಿದ ಮುಸ್ಲಿಂ ಸಮುದಾಯದವರು ಧರ್ಮ ಗುರುಗಳಾದ ಮಹಮ್ಮದ್ ಸೌದ್ ಹಾಗೂ ಮಹಮ್ಮದ್ ತೋಫಿಕ್ ಅವರ ಪ್ರವಚನ ಆಲಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡರು. ಅಲ್ಲಿಯೂ ವಿಶೇಷ ಪ್ರಾರ್ಥನೆ, ಧಾರ್ಮಿಕ ಪ್ರವಚನ ನಡೆದವು.

ಕುಶಾಲನಗರ

ರಂಜಾನ್ ಹಬ್ಬದ ಅಂಗವಾಗಿ ಕುಶಾಲನಗರದಲ್ಲಿ ವಿವಿಧೆಡೆ ಮುಸ್ಲಿಂ ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮ ನಡೆಯಿತು. ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಸಮುದಾಯ ಬಾಂಧವರು ಪ್ರಾರ್ಥನೆಯಲ್ಲಿ ತೊಡಗಿದ್ದರು. ಧರ್ಮಗುರುಗಳಾದ ಮೌಲಾನ ಮುಫ್ತಿ ಮುದಾಬಿರ್ ಧಾರ್ಮಿಕ ಪ್ರವಚನ ನಡೆಸಿದರು.