ವೀರಾಜಪೇಟೆ, ಜೂ. 17: ವೀರಾಜಪೇಟೆ ಬಳಿಯ ತೋರ ಗ್ರಾಮದ ಮನೆಯಲ್ಲಿ ಸೇರಿಕೊಂಡಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಇಂದು ಬೆಳಿಗ್ಗೆ ಅದೇ ಗ್ರಾಮದ ಮಹೇಶ್ ಎಂಬವರು ಹಿಡಿದು ಅದನ್ನು ಇಲ್ಲಿನ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ.

12 ಅಡಿ ಉದ್ದದ ನಾಲ್ಕು ಇಂಚುಗಳಷ್ಟು ಅಧಿಕ ಸುತ್ತಳತೆಯ 30 ಕೆ.ಜಿ. ತೂಕದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯ ಫಾರೆಸ್ಟರ್ ಸುಬ್ರಾಯ, ಸಿಬ್ಬಂದಿಗಳು ಮಾಕುಟ್ಟ ಅರಣ್ಯಕ್ಕೆ ತೆರಳಿ ಅದನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.