ಗೋಣಿಕೊಪ್ಪ ವರದಿ, ಜೂ. 17: ತಿತಿಮತಿಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಮುಗಿದಿದ್ದು, ಇಂದಿನಿಂದ ಬಸ್ ಸಂಚಾರ ಆರಂಭಗೊಳ್ಳಲಿದೆ. ನೂತನ ಸೇತುವೆ ನಿರ್ಮಾಣ ಕಾಮಗಾರಿ ನಿರ್ಮಾಣ ಹಂತದಲ್ಲಿರುವದರಿಂದ ಇಲ್ಲಿ ತಾತ್ಕಾಲಿಕ ಸೇತುವೆ ಮೂಲಕ ವಾಹನಗಳು ಸಂಚರಿಸುತ್ತಿತ್ತು. ಇದರಿಂದಾಗಿ ಗೋಣಿಕೊಪ್ಪಲು-ಮೈಸೂರು ಹೆದ್ದಾರಿಯಲ್ಲಿ ಸಂಪರ್ಕ ಕಳೆದುಕೊಂಡಿತ್ತು. 4 ದಿನಗಳಿಂದ ಮಳೆಯ ಕಾರಣ ಕುಸಿದಿದ್ದ ಸೇತುವೆ ಮರು ನಿರ್ಮಾಣ ಮಾಡಲಾಗಿದೆ. ಸೋಮವಾರದಿಂದ ಭಾರೀ ವಾಹನಗಳು ಸಂಚರಿಸಲಿದೆ.