ಮಡಿಕೇರಿ, ಜೂ. 17: ಹತ್ತನೇ ವರ್ಷದ ಬಿದ್ದಂಡ ಪೂವಮ್ಮ ಅಯ್ಯಪ್ಪ ಸ್ಮಾರಕ ಸಂಗೀತ ಸ್ಪರ್ಧೆಯು ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ಅರ್ಥಪೂರ್ಣ ವಾಗಿ ಜರುಗಿತು.
ಜಿಲ್ಲೆಯ ಬೇರೆ ಬೇರೆ ಭಾಗಗಳ ಶಾಲಾ ಕಾಲೇಜುಗಳಿಂದ ಜೂನಿ ಯರ್ ವಿಭಾಗಕ್ಕೆ 38 ಅಭ್ಯರ್ಥಿಗಳು, ಸೀನಿಯರ್ ವಿಭಾಗಕ್ಕೆ 20 ಅಭ್ಯರ್ಥಿಗಳು ಭಾಗವಹಿಸಿದ್ದರು. ಪ್ರತಿ ವಿಭಾಗಕ್ಕೂ ಒಂದನೇ, ಎರಡನೇ, ಮೂರನೇ ಮತ್ತು ನಾಲ್ಕನೇ ಆಕರ್ಷಕ ಬಹುಮಾನ ಗಳನ್ನಿತ್ತು, ಅವರ ಪ್ರಯಾಣ ಭತ್ಯೆವನ್ನು ಎಲ್ಲಾ ಮಕ್ಕಳಿಗೂ ಪ್ರೋತ್ಸಾಹಕರ ಬಹುಮಾನಗಳನ್ನು ನೀಡಲಾಯಿತು.
ಆಯೋಜಕರು ತಮ್ಮ ಮಾತಿನಲ್ಲಿ ಎಲ್ಲರಲ್ಲೂ ತಂದೆ - ತಾಯಿಯರ ಮೇಲೆ ಪ್ರೀತಿ, ವಿಶ್ವಾಸ ಹೆಚ್ಚಾಗಬೇಕೆಂದೂ ಅವರು ನಮಗಿತ್ತ ಆಶೀರ್ವಾದಗಳನ್ನು ಅವರ ಹೆಸರಿನಲ್ಲಿ ಉತ್ತಮ ಕಾರ್ಯಕ್ರಮ ಗಳನ್ನು ನಡೆಸಿ ಅವರ ಆಶಿರ್ವಾದಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕೆಂದು ವಿನಂತಿಸಿಕೊಂಡರು.
ಸೀನಿಯರ್ ವಿಭಾಗದ ಪುರಂದರ ದಾಸರ ಹಾಡುಗಳಲ್ಲಿ ಎಮ್.ಡಿ. ಆಯುಷ್, ಕೂರ್ಗ್ ಪಬ್ಲಿಕ್ ಸ್ಕೂಲ್ ಪ್ರಥಮ, ಆಕಾಶ್ ಪೇಟ್ರಿಕ್ ಪಿ.ಇ.ಎಸ್. ಇಂಜಿನಿಯ ರಿಂಗ್ ಕಾಲೇಜ್ ದ್ವಿತೀಯ, ಸ್ನೇಹಾ ಮೋಹಿತ್, ಕೂರ್ಗ್ ಪಬ್ಲಿಕ್ ಸ್ಕೂಲ್ ತೃತೀಯ, ಕ್ಷೀರ, ಸಂತ ಜೋಸೆಫರ ಜೂನಿಯರ್ ಕಾಲೇಜ್ ನಾಲ್ಕನೇ ಬಹುಮಾನ ಪಡೆದರು.
ಜೂನಿಯರ್ ವಿಭಾಗದ ಕನಕದಾಸರ ಹಾಡುಗಳಲ್ಲಿ ಎನ್.ಎ. ವಿಕಾಶ್ ಶ್ರೀನಿವಾಸನ್, ಭಾರತೀಯ ವಿದ್ಯಾಭವನ ಪ್ರಥಮ, ಸೋನಾಲ್ ಸೀತಮ್ಮ ಕೆ.ಕೆ. ಭಾರತೀಯ ವಿದ್ಯಾಭವನ ದ್ವಿತೀಯ, ಕೆ.ಎಸ್. ರಾಮ ಸ್ವರೂಪ್ ಹೊಳ್ಳ ಭಾರತೀಯ ವಿದ್ಯಾಭವನ ತೃತೀಯ, ಆಶ್ರಿತಾ ಟಿ.ಎಮ್. ಸಂದೀಪನಿ ಸ್ಕೂಲ್ ಸೋಮವಾರಪೇಟೆ ನಾಲ್ಕನೇ ಬಹುಮಾನ ಪಡೆದರು.