ಗೋಣಿಕೊಪ್ಪ ವರದಿ, ಜೂ. 17: ತಿತಿಮತಿಯಲ್ಲಿ ರಸ್ತೆಯ ನಡುವೆ ಹೂತುಕೊಂಡ ಕೇರಳ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಅನ್ನು ಕ್ರೇನ್ ಮೂಲಕ ಮೇಲತ್ತಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಮೈಸೂರಿನಿಂದ ಗೋಣಿಕೊಪ್ಪ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ತಿತಿಮತಿಯಲ್ಲಿ ದಾರಿ ತಪ್ಪಿ ಅರಣ್ಯ ಪ್ರದೇಶದ ದೇವಮಚ್ಚಿ ರಸ್ತೆಯಲ್ಲಿ ಸಾಗಿದೆ. ಸುಮಾರು 2 ಕಿ.ಮೀ. ದೂರ ಸಾಗಿದ ಬಸ್ ಕಿರಿದಾದ ರಸ್ತೆಯ ಬದಿಯಲ್ಲಿ ಹೂತುಕೊಂಡಿತು. ನಂತರ ಸ್ಥಳೀಯರ ಸಹಕಾರದಲ್ಲಿ ಕ್ರೇನ್ ಮೂಲಕ ಮೇಲೆಳೆದು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸ್ಥಳೀಯ ಪೊಲೀಸರು ಇದ್ದರು.