ಮಡಿಕೇರಿ, ಜೂ. 17: ಕೊಡಗು ಜಿಲ್ಲಾ ಕುಲಾಲರ್ (ಕುಂಬಾರ -ಮೂಲ್ಯ) ಸಮಾಜದ 12ನೇ ವಾರ್ಷಿಕ ಉತ್ಸವವು ನಗರದ ಪೆನ್‍ಷನ್ ಲೈನ್ ರಸ್ತೆಯಲ್ಲಿರುವ ಬೆಳ್ಯಪ್ಪ ಸ್ಮಾರಕ ಭವನದಲ್ಲಿ ಸಮಾಜದ ಅಧ್ಯಕ್ಷ ಎಂ.ಡಿ. ನಾಣಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನು ಉದ್ಘಾಟಿಸಿದ ಸಮಾಜದ ಸ್ಥಾಪಕಾಧ್ಯಕ್ಷೆ ಕೆ.ಎಸ್. ಮುತ್ತಮ್ಮ ಮಾತನಾಡಿ, ನಮ್ಮ ಕುಲಬಾಂಧವರೆಲ್ಲರೂ ಶ್ರಮಪಟ್ಟು ಸಮಾಜದಲ್ಲಿ ಗೌರವದಿಂದ ಬಾಳ್ವೆ ನಡೆಸಬೇಕು. ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ರಾಜ್ಯ ಮಟ್ಟದಲ್ಲಿ ಹೆಸರುವಾಸಿ ಯಾಗಬೇಕೆಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಎಂ.ಡಿ. ನಾಣಯ್ಯ ಮಾತನಾಡಿ ನಮ್ಮ ಸಮಾಜದ ಯುವ ಪೀಳಿಗೆಯು ಧರ್ಮದ ಕಡೆಗೆ ಸಾಗುತ್ತಿರುವದಾಗಿ ಶ್ಲಾಘಿಸಿದರು. ಸಮಾಜದ 2017-18ನೇ ಸಾಲಿನ ಸಾಧಕರಿಗೆ ಸನ್ಮಾನವನ್ನು ಮಾಡಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿ ಗಳಿಗೆ ಪ್ರಮಾಣ ಪತ್ರದೊಂದಿಗೆ ಪ್ರೋತ್ಸಾಹಧನವನ್ನು ನೀಡಿ ಅಭಿನಂದಿಸಲಾಯಿತು. ದೇಶದಲ್ಲಿ ಮರಣ ಹೊಂದಿದ ವೀರ ಸೇನಾನಿಗಳಿಗೆ ಮೌನ ಆಚರಣೆಯ ಮೂಲಕ ಗೌರವ ಸೂಚಿಸಿ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು.

2018-19ನೇ ಸಾಲಿನ ಹೊಸ ಆಡಳಿತ ಮಂಡಳಿಯ ರಚನೆಯನ್ನು ಅಧ್ಯಕ್ಷರ ಹಾಗೂ ಸ್ಥಾಪಕಾಧ್ಯಕ್ಷರ ಸಮ್ಮುಖದಲ್ಲಿ ಮಾಡಲಾಯಿತು. ಭೋಜನ ವಿರಾಮದ ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯ ಕ್ರಮಗಳು ನಡೆದವು. ಕಾರ್ಯಕ್ರಮದ ನಿರೂಪಣೆ ವಿ.ಜಿ. ಲೋಕೇಶ್ ಮಾಡಿದರು.

ಸಭೆಯಲ್ಲಿ ಸಮುದಾಯದ ಜಿಲ್ಲಾ ಉಪಾಧ್ಯಕ್ಷ ಕೆ.ಆರ್. ಮನು ದೇವಪ್ಪ, ಕಾರ್ಯದರ್ಶಿ ಕೆ.ಕೆ. ಮಂಜುನಾಥ್ ಮೂಲ್ಯ, ಉಪಕಾರ್ಯದರ್ಶಿ ಶೀಲಾವತಿ ಕೆ.ಎಚ್., ಖಜಾಂಚಿ ಓ.ಆರ್. ಮಾಯಿಲ್ಲಪ್ಪ, ನಿರ್ದೇಶಕರುಗಳಾದ ರಾಮಚಂದ್ರ, ದಾಮೋದರ ಕೆ.ಕೆ. ಹಾಗೂ ಇತರ ಎಲ್ಲಾ ಆಡಳಿತ ವರ್ಗ ಹಾಜರಿದ್ದರು.