ಮಡಿಕೇರಿ, ಜೂ. 17: ಕೊಡಗು ಬೆಳೆಗಾರರ ಒಕ್ಕೂಟದ ವತಿಯಿಂದ ತಾ. 19 ರಂದು (ನಾಳೆ) ಬೆಳಿಗ್ಗೆ 10.30ಕ್ಕೆ ಗೋಣಿಕೊಪ್ಪಲುವಿನ ಹೊಟೇಲ್ ಸಿಲ್ವಸ್ಕೈ ಸಭಾಂಗಣದಲ್ಲಿ ಮಹತ್ವದ ಸಭೆಯೊಂದನ್ನು ಏರ್ಪಡಿಸಲಾಗಿದೆ.

ಕರಿಮೆಣಸಿನ ಧಾರಣೆಗೆ ಸಂಬಂಧಿಸಿದಂತೆ ಕಂಪೆನಿಯೊಂದರ ವಹಿವಾಟಿನಿಂದ ಬೆಳೆಗಾರರಿಗೆ ಅನ್ಯಾಯವಾಗುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇದನ್ನು ಕೊಡಗು ಸೇರಿದಂತೆ ಕರಿಮೆಣಸು ಬೆಳೆಯುವ ಇತರ ಪ್ರದೇಶದ ಬೆಳೆಗಾರರು ಸೇರಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವ ತೀರ್ಮಾನಕ್ಕೆ ಬರಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಿ ರೂಪುರೇಷೆ ಹಮ್ಮಿಕೊಳ್ಳಲು ಈ ಸಭೆ ಕರೆಯಲಾಗಿದ್ದು, ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಒಕ್ಕೂಟದ ಅಧ್ಯಕ್ಷ ಕೆ.ಎಂ. ಹರೀಶ್ ಅವರು ಕೋರಿದ್ದಾರೆ.