ವೀರಾಜಪೇಟೆ, ಜೂ. 17: ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲೆಯ ವರ್ತುಲ ವಿದ್ಯುತ್ ಮಾರ್ಗದ ಮಡಿಕೇರಿ-ವೀರಾಜಪೇಟೆ ಸಂಪರ್ಕದ 66ಕೆ.ವಿ. ಮಾರ್ಗದ ಕಾಮಗಾರಿಗಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿ ರುವದರಿಂದ ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸ ಲಾಗುವದು ಎಂದು ಸೆಸ್ಕ್‍ನ ಚಾಮರಾಜನಗರ ಹಾಗೂ ಕೊಡಗು ವೃತ್ತದ ಅಧೀಕ್ಷಕ ಇಂಜಿನಿಯರ್ ಪ್ರತಾಪ್ ತಿಳಿಸಿದರು.
ಪಟ್ಟಣದಲ್ಲಿ ಸೆಸ್ಕ್ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತ ನಾಡಿದರು. ಜಿಲ್ಲೆಯ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಕೆ. ಬೋಪಯ್ಯ ಮತ್ತು ಅಬ್ದುಲ್ಲಾ ಎಂಬವರು 66ಕೆ.ವಿ. ವಿದ್ಯುತ್ ಮಾರ್ಗದ ಬಗ್ಗೆ ಪ್ರಶ್ನಿಸಿದಾಗ ಪ್ರತಾಪ್ ಅವರು ಈ ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರಿನ್ಸ್ ಪೊನ್ನಪ್ಪ ಮಾತನಾಡಿ, ಈ ವಿಭಾಗದಲ್ಲಿ ಪ್ರಮುಖವಾಗಿ ದೂರು ಸ್ವೀಕಾರಕ್ಕೆ ಸರಿಯಾದ ವ್ಯವಸ್ಥೆ ಇಲ್ಲ ಮುಂದೆ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ರಾತ್ರಿ ವೇಳೆ ದೂರನ್ನು ಸ್ವೀಕರಿ ಸುವವರು ಯಾರೂ ಇರುವದಿಲ್ಲ. ಯಾವದೇ ದೂರವಾಣಿ ಕರೆಗೂ ಸ್ಪಂದಿಸುವವರಿಲ್ಲ. ಆದ್ದರಿಂದ ಜನರ ದೂರು ಸ್ವೀಕಾರ ಮತ್ತು ಕೈಗೊಂಡ ಕ್ರಮದ ಬಗ್ಗೆ ಸೂಕ್ತ ದಾಖಲೆಯ ಕಡತವನ್ನು ನಿರ್ವಹಿಸಬೇಕು. ಜತೆಗೆ ಮೀಟರ್ ರೀಡರ್‍ಗಳು ಮನೆಗೆ ಬಾರದೆ ತೀವ್ರ ತೊಂದರೆಯಾಗುತ್ತಿದೆ ಎಂದರು.
ಪಿ. ನಂಜಪ್ಪ, ಅಯ್ಯಪ್ಪ ಮತ್ತಿತರರು ಮಾತನಾಡಿ, ಸಮೀಪದ ಬೇಟೋಳಿ ಮಾರ್ಗದಲ್ಲಿನ ಸಮಸ್ಯೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಈ ಕುರಿತು ಉತ್ತರಿಸಿದ ಜಿಲ್ಲಾ ಇಂಜಿನಿಯರ್ ವಿದ್ಯುತ್ ಅಡಚಣೆಯಾದರೆ ಕೂಡಲೇ ಸ್ವಯಂ ಚಾಲಿತವಾಗಿ ಆ ಮಾರ್ಗದಲ್ಲಿ ವಿದ್ಯುತ್ ಕಡಿತವಾಗುತ್ತದೆ. ಶೀಘ್ರದಲ್ಲಿ ಮತ್ತಷ್ಟು ಸಿಬ್ಬಂದಿಗಳ ನೇಮಕವಾದ ಬಳಿಕ ಸಮಸ್ಯೆ ಬಗೆಹರಿಯಲಿದೆ ಎಂದರು.
ಕೆದಮುಳ್ಳೂರು ಗ್ರಾಮದ ಚೋಟು ಬಿದ್ದಪ್ಪ ಮಾತನಾಡಿ, ಬೇತ್ರಿ ಹಾಗೂ ಕೆದಮುಳ್ಳೂರು ಗ್ರಾಮಕ್ಕೆ ಒಂದೇ ಬ್ರೇಕರ್ ಇರುವದರಿಂದ ಸಮಸ್ಯೆಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಇಲ್ಲಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುರೇಶ್, ಈಗಾಗಲೇ ಬೇಟೋಳಿ, ಬಿಟ್ಟಂಗಾಲ, ಕೆದಮುಳ್ಳೂರು ಗ್ರಾಮಗಳನ್ನು ಪ್ರತ್ಯೇಕಿಸಲು ಲೈನ್ ಅಳವಡಿಸಲಾಗಿದೆ. ಆದರೆ ಬ್ರೇಕರ್ ಅಳವಡಿಕೆಗೆ ಅನುಮತಿ ಸಿಕ್ಕಿಲ್ಲ ಎಂದರು.
ಸಭೆಯಲ್ಲಿ ಕೊಡಗು ಹಾಗೂ ಚಾಮರಾಜನಗರ ವೃತ್ತದ ಸಹಾಯಕ ಕಾರ್ಯಪಾಲಕ ಇಂಜಿನಿ ಯರ್ ತಾರ, ವೀರಾಜಪೇಟೆಯ ಸಹಾಯಕ ಇಂಜಿನಿಯರ್ ಶಿವಣ್ಣ ಪಾಟೀಲ್, ಸಾರ್ವಜನಿಕರ ಪರವಾಗಿ ಬಿಟ್ಟಂಗಾಲದ ಅನುಪಮ್ ರೈ, ಬೆಳ್ಯಪ್ಪ, ಹೇಮಚಂದ್ರ, ಮತ್ತಿತರರು ಹಾಜರಿದ್ದರು.