ಕೂಡಿಗೆ, ಜೂ. 18: ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ಕೊಡಗು ವೃತ್ತದಲ್ಲಿ ತೆರವಾಗಿರುವ ಉಪವಲಯ ಅರಣ್ಯ ಅಧಿಕಾರಿ,, ಮೋಜಣೆದಾರರ ಮತ್ತು ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದೆ. ಅಭ್ಯರ್ಥಿಗಳ ದೈಹಿಕ ಸಮರ್ಥತಾ ಪರೀಕ್ಷೆಯು ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಉಪವಲಯ ಅರಣ್ಯ ಅಧಿಕಾರಿಗಳ 14 ಹುದ್ದೆಗೆ 13 ಪುರುಷರು, ಮಹಿಳಾ ವಿಭಾಗದ 12 ಹುದ್ದೆಗಳಲ್ಲಿ 11 ಅಭ್ಯರ್ಥಿಗಳು ಹಾಗೂ ಅರಣ್ಯ ರಕ್ಷಕರ ಹುದ್ದೆಗೆ 34 ಪುರುಷರು ಹಾಗೂ ಮಹಿಳಾ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.
ನೇಮಕಾತಿ ಪ್ರಕ್ರಿಯೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಕೊಡಗು ವೃತ್ತದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ವಿವಿಧ ಜಿಲ್ಲೆಗಳಿಂದ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.
ಆಯ್ಕೆ ಪ್ರಕ್ರಿಯೆಯ ಸಂದರ್ಭ ಕೊಡಗು ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಡಿ.ಎಂ.ಮಂಜುನಾಥ್, ಮಡಿಕೇರಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು, ಸೋಮವಾರಪೇಟೆ ಅರಣ್ಯ ಸಂರಕ್ಷಣಾಧಿಕಾರಿ ಚಿಣ್ಣಪ್ಪ, ಕುಶಾಲನಗರ ಅರಣ್ಯ ವಲಯಾಧಿಕಾರಿ ಅರುಣ್ಕುಮಾರ್, ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಲಕ್ಷ್ಮಿಕಾಂತ್, ಸಂಪಾಜೆ ವಲಯ ಅರಣ್ಯಾಧಿಕಾರಿ ಕುಮಾರಿ ಶಾಮ್ ಹಾಗೂ ವಿವಿಧ ವೃತ್ತಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು.