*ಗೋಣಿಕೊಪ್ಪಲು, ಜೂ. 19: ತಿತಿಮತಿ ಬಾಳುಮನಿ ಸೇತುವೆ ಬಸ್ ಸಂಚಾರಕ್ಕೆ ಇಂದು 4 ಗಂಟೆಯ ನಂತರ ಅನುವು ಮಾಡಿಕೊಡಲಾಗಿದೆ ಎಂದು ಇಂಜಿನಿಯರ್ ಪ್ರಸನ್ನ ಕುಮಾರ್ ಮಾಹಿತಿ ನೀಡಿದ್ದಾರೆ.
ಕಳೆದ ಒಂದು ವಾರದ ಹಿಂದೆ ಮಳೆಯ ತೀವ್ರತೆಯಿಂದ ಸೇತುವೆ ಕುಸಿದು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ತಾತ್ಕಾಲಿಕ ಲಘು ವಾಹನಗಳ ಸಂಚಾರಕಷ್ಟೇ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಸೇತುವೆ ತಾತ್ಕಾಲಿಕವಾಗಿ ವ್ಯವಸ್ಥಿತ ಕಾಮಗಾರಿ ನಡೆಸಿ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಲಾರಿಗಳ ಸಂಚಾರಕ್ಕೆ ನಿಷೇದ ಏರಲಾಗಿದೆ ಎಂದು ತಿಳಿಸಿದ್ದಾರೆ.