*ಗೋಣಿಕೊಪ್ಪಲು, ಜೂ. 19 : ಕಳೆದ ವಾರ ಸುರಿದ ದಾರಾಕಾರ ಮಳೆಯಿಂದ 25ಕ್ಕೂ ಹೆಚ್ಚು ಭಾಗಗಳಲ್ಲಿ ಭೂ ಕುಸಿತದಿಂದ ಹಾನಿಯುಂಟಾಗಿ ಸಾರಿಗೆ ಸಂಪರ್ಕ ಕಡಿತಗೊಂಡ ಅಂತರ್‍ರಾಜ್ಯ ಹೆದ್ದಾರಿ ಪೆರುಂಬಾಡಿ ಮಾಕುಟ್ಟ ರಸ್ತೆಗೆ ಕೊಡÀಗು ಮೈಸೂರು ಲೋಕಸಭಾ ಕ್ಷೇತ್ರ ಸದಸ್ಯ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಬೇಟಿ ಕಡಿತಗೊಂಡ ಅಂತರ್‍ರಾಜ್ಯ ಹೆದ್ದಾರಿ ಪೆರುಂಬಾಡಿ ಮಾಕುಟ್ಟ ರಸ್ತೆಗೆ ಕೊಡÀಗು ಮೈಸೂರು ಲೋಕಸಭಾ ಕ್ಷೇತ್ರ ಸದಸ್ಯ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಬೇಟಿ (ಮೊದಲ ಪುಟದಿಂದ) ಪರಿಹಾರದ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು. ಜಿಲ್ಲಾಡಳಿತ ಪ್ರಕೃತಿ ವಿಕೋಪಕ್ಕೆ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದನ್ನು ಪರಿಹಾರಕ್ಕೆ ಬಳಸಿ ಪ್ರಕೃತಿ ವಿಕೋಪ ಎದುರಿಸಲು ಎಲ್ಲಾ ರೀತಿಯ ನೆರವು ನೀಡಬೇಕು ಈ ಹಂತದಲ್ಲಿ ಅಧಿಕಾರಿ ಗಳು ಕಾರ್ಯನಿರ್ವಹಿಸ ಬೇಕು ಎಂದು ಹೇಳಿದರು. ಕೊಡಗಿನಲ್ಲಿ ಸುರಿದ ಮಳೆಯಿಂದ ಜೂನ್ ತಿಂಗಳಿನಲ್ಲೇ ಕೆ.ಆರ್.ಎಸ್. ನೀರು 100 ಅಡಿ ತುಂಬಿದೆ. ಇದು ಸಂತೋಷ ಪಡುವ ವಿಚಾರ ವಾದರೂ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಉಂಟಾದ ಹಾನಿಗೆ ಕಣ್ಣೀರು ಸುರಿಸಬೇಕಾಗಿದೆ. ಸಂಬಂಧ ಪಟ್ಟ ಸಚಿವರು ಶೀಘ್ರ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು. ತುರ್ತಾಗಿ ಮಳೆ ಪರಿಹಾರವನ್ನು ಒದಗಿಸಿಕೊಡುವ ಮೂಲಕ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳು ಮುಂದಾಗಬೇಕು ಎಂದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಅರಣ್ಯ ಇಲಾಖೆಯಿಂದ ಶೀಘ್ರಗತಿಯಲ್ಲಿ ಮರಗಳ ರೆಂಬೆ ಕತ್ತರಿಸುವ ಕಾರ್ಯ ನಡೆಯ ಬೇಕಾಗಿದೆ. ಹಾನಿ ಉಂಟಾದ ವಾರದಿಂದ ಮೂರು ಬಾರಿ ಭೇಟಿ ನೀಡಿದರು. ರೆಂಬೆ ಕತ್ತರಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಿಲ್ಲ. ಲೋಕೋಪಯೋಗಿ ಇಲಾಖೆ ಇಂಜಿನಿಯರುಗಳು, ಕಂದಾಯ ಇಲಾಖೆ ಅಧಿಕಾರಿಗಳು ಮಳೆ ಹಾನಿ ಪರಿಹಾರಕ್ಕೆ ಕ್ರಮ ಕೈಗೊಂಡು ರಸ್ತೆಯ ಸುಗಮ ಸಂಚಾರಕ್ಕೆ ಶೀಘ್ರಗತಿಯಲ್ಲೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭ ತಹಶೀಲ್ದಾರ್ ಗೋವಿಂದ ರಾಜು, ಬಿ.ಜೆ.ಪಿ ಜಿಲ್ಲಾಧ್ಯಕ್ಷ ಭಾರತೀಶ್, ರಾಜ್ಯ ಪ್ರವಾಸೋದ್ಯಮ ಸಮಿತಿ ಉಪಾಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಆರ್.ಎಂ.ಸಿ. ಅದ್ಯಕ್ಷ ಸುವೀನ್ ಗಣಪತಿ, ಬಿ.ಜೆ.ಪಿ ತಾಲೂಕು ಕೋಶಾಧಿಕಾರಿ ಚೋಡುಮಾಡ ಶ್ಯಾಮ್ ಪೂಣಚ್ಚ, ಫೆಡರೇಶನ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ, ಜಿಲ್ಲಾ ಯುವ ಮೂರ್ಚ ಅಧ್ಯಕ್ಷ ಗಪ್ಪು ಹಾಜರಿದ್ದರು.

-ಚಿತ್ರ, ವರದಿ : ಎನ್.ಎನ್. ದಿನೇಶ್