ಮಡಿಕೇರಿ, ಜೂ. 18: ಕೊಡಗು ಮೀಡಿಯಾ ಸರ್ವಿಸಸ್‍ನ ಉದ್ಯೋಗಿಯಾಗಿದ್ದ ಸುನಿಲ್‍ರಾಜ್ ಎಂಬಾತ ಮಾಲೀಕರಿಗೆ ವಂಚಿಸಿರುವ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿಯು ಕೇಬಲ್ ಅಳವಡಿಕೆ ಸಂಬಂಧ ಅಂದಾಜು ರೂ. 7 ಲಕ್ಷ ಮೊತ್ತದ ಬಿಡಿಭಾಗಗಳನ್ನು ಬೇರೆ ಬೇರೆ ವ್ಯಕ್ತಿಗಳಿಗೆ ಮಾರಾಟಗೊಳಿಸಿ ನಂಬಿಕೆ ದ್ರೋಹದೊಂದಿಗೆ ಮೋಸ ಮಾಡಿರುವದಾಗಿ ತಿಳಿದುಬಂದಿದೆ. ಆ ಮೇರೆಗೆ ಮಾಲೀಕ ತಮ್ಮುಪೂವಯ್ಯ ನೀಡಿರುವ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾಯ್ದೆ 408 ಹಾಗೂ 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವದಾಗಿ ಠಾಣಾಧಿಕಾರಿ ಷಣ್ಮುಖಪ್ಪ ಖಚಿತಪಡಿಸಿದ್ದಾರೆ.