ಗೋಣಿಕೊಪ್ಪ, ಜೂ. 18 : ದುಸ್ಥಿತಿಯಲ್ಲಿರುವ ತಿತಿಮತಿಯ ತಾತ್ಕಾಲಿಕ ಸೇತುವೆ ಮೂಲಕ ಭಾರೀ ವಾಹನಗಳ ಸಂಚಾರ ನಿರ್ಬಂಧಿಸ ಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ತಾತ್ಕಾಲಿಕ ಸೇತುವೆಯ ಕೆಳಗಿನ ಮೋರಿ ಮುರಿಯುವ ಹಂತದಲ್ಲಿದೆ. ಆದ್ದರಿಂದ ಬಸ್ ಹೊರತುಪಡಿಸಿ ಲಾರಿ, ಮರ ಸಾಗಣೆ, ಭಾರೀ ವಾಹನಗಳು ಸಂಚರಿಸಲು ಅವಕಾಶ ನೀಡಬಾರದು. ಸೇತುವೆ ಕುಸಿದು ಹೋದರೆ ಸಂಪೂರ್ಣವಾಗಿ ಸಂಪರ್ಕ ಕಡಿದು ಹೋಗುವ ಆತಂಕವಿದೆ ಎಂದು ಅಂಬೇಡ್ಕರ್ ವಾದ ಸಂಘಟನೆ ಅಧ್ಯಕ್ಷ ಶಿವಣ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.