ಸಿದ್ದಾಪುರ, ಜೂ. 18: ಹಾಡಹಗಲೇ ವೈದ್ಯರೊಬ್ಬರ ಬ್ಯಾಗ್ ಅನ್ನು ಯಾರೋ ಅಪಹರಿಸಿರುವ ಘಟನೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರದಂದು ನಡೆದಿದೆ. ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಾದ ಡಾ. ಮನ್ಮೋಹನ್ ಅವರು ಕೊಠಡಿಯೊಳಗೆ ಇಟ್ಟಿದ್ದ ರೂ. 13 ಸಾವಿರ ಬೆಲೆ ಬಾಳುವ ಬ್ಯಾಗ್ ಅನ್ನು ಹಾಗೂ ಅದರ ಒಳಗಿದ್ದ ರೋಗಿಗಳನ್ನು ತಪಾಸಣೆ ಮಾಡುವ ವಸ್ತುವೊಂದನ್ನು ಯಾರೋ ಅಪಹರಿಸಿರುವ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ಡಾ. ಮನ್ಮೋಹನ್ ದೂರು ನೀಡಿದ್ದಾರೆ.
ಬ್ಯಾಗ್ನಲ್ಲಿ ಯಾವದೇ ಹಣ ಇರಲಿಲ್ಲ ಎನ್ನಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.