*ಗೋಣಿಕೊಪ್ಪಲು, ಜೂ. 18 : ನಿಟ್ಟೂರು ನೂತನ ಸೇತುವೆ ಬಿರುಕು ಬಿಟ್ಟಿದೆ ಎಂಬ ಸಾರ್ವಜನಿಕರ ಆರೋಪದ ಮೇಲೆ ಶಾಸಕ ಕೆ.ಜಿ. ಬೋಪಯ್ಯ ಖುದ್ದು ಬೇಟಿ ನೀಡಿ ಸೇತುವೆ ವ್ಯವಸ್ಥೆಯನ್ನು ಪರಿಶೀಲಿಸಿದರು.

ಸೇತುವೆಯಲ್ಲಿ ಸಣ್ಣ ಸಣ್ಣ ಗೆರೆಗಳು ಮೂಡುವ ರೀತಿಯಲ್ಲಿ ಬಿರುಕು ಬಿಟ್ಟಿದ್ದನ್ನು ಕಂಡು ಶಾಸಕರು ಇಂಜಿನಿಯರ್‍ಗಳಿಗೆ ದೂರವಾಣಿ ಕರೆ ಮಾಡುವ ಮೂಲಕ ಸೇತುವೆಯ ಕಾಮಗಾರಿ ಮತ್ತು ಅದರ ಗುಣಮಟ್ಟವನ್ನು ವಿಚಾರಿಸಿದರು. ಕೂಡಲೇ ಸ್ಥಳಕ್ಕೆ ಬೇಟಿ ನೀಡಿ ಸೇತುವೆಯ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಆದೇಶಿಸಿದರು. ತೀವ್ರ ಮಳೆ ಸಂದರ್ಭದಲ್ಲಿ ಸೇತುವೆ ಮೇಲೆ ನೀರು ಬರುವ ಆತಂಕವಿದ್ದು, ಸೇತುವೆಯ ಎರಡು ಬದಿಗಳಿಗೆ ಭದ್ರತಾ ತಡೆ ಗೋಡೆಗಳನ್ನು ನಿರ್ಮಿಸಿಕೋಡಬೇಕು ಎಂದು ಸಾರ್ವಜನಿಕರು ಈ ಸಂದರ್ಭ ಶಾಸಕರಲ್ಲಿ ಮನವಿ ಮಾಡಿಕೊಂಡರು.

ತಾಲೂಕು ದಂಡಾಧಿಕಾರಿ ಗೋವಿಂದ ರಾಜು, ಪೆÇನ್ನಂಪೇಟೆ ಠಾಣಾಧಿಕಾರಿ ಮಹೇಶ್, ಆರ್.ಎಂ.ಸಿ. ಸದಸ್ಯ ಸುಜಾ, ಬಿ.ಜೆ.ಪಿ. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ನಾಣಯ್ಯ, ಬಿ.ಜೆ.ಪಿ. ಮುಖಂಡರಾದ ಅರಮಣಮಾಡ ರಂಜನ್, ನಿಟ್ಟೂರು ಗ್ರಾ. ಪಂ. ಸದಸ್ಯ ಚಕ್ಕೇರ ಸೂರ್ಯ, ತಾಲೂಕು ಫೆಡರೇಷನ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ, ಬೋಸ್ ಮಂದಣ್ಣ, ಕಾನೂನು ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್, ಜೆ.ಡಿ.ಎಸ್. ಪ್ರಮುಖರಾದ ಸುಬ್ರಮಣಿ ಹಾಗೂ ಗ್ರಾಮಸ್ಥರು ಹಾಜರಿದ್ದರು.