ಕೂಡಿಗೆ, ಜೂ. 18 : ಕೂಡಿಗೆಯಲ್ಲಿನ ಕಾರ್ಪೊರೇಷನ್ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜೂನ್ 11ರಂದು ಮಹಿಳೆಯರಿಗೆ 30 ದಿನಗಳ ಹೊಲಿಗೆ ತರಬೇತಿಯ ನೀಡಲಾಗುತ್ತಿದ್ದು, ತರಬೇತಿ ಶಿಬಿರದಲ್ಲಿ 23 ಮಹಿಳೆಯರು ಭಾಗವಹಿಸುತ್ತಿದ್ದಾರೆ.
ತರಬೇತಿ ಕಾರ್ಯಗಾರವನ್ನು ಸಂಸ್ಥೆಯ ನಿರ್ದೇಶಕ ಪಿ.ಡಿ.ಸುರೇಶ್ ಉದ್ಘಾಟಿಸಿ, ಮಾತನಾಡಿ ಮಹಿಳೆಯರು ಸ್ವ ಉದೋಗ್ಯ ನಡೆಸಲು ಅವರಿಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ತರಬೇತಿ ನೀಡಲಾಗುವದು ಹಾಗೂ ಬ್ಯಾಂಕ್ಗಳ ಮೂಲಕ ಶಿಫಾರಸ್ಸು ಅರ್ಜಿಗಳಿಗೆ ಆದ್ಯತೆ ನೀಡಿ ಸಾಲ ಸೌಲಭ್ಯ ನೀಡಲಾಗುವದು. ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಉಚಿತವಾಗಿ ನೀಡಲಾಗುತ್ತಿದೆ .ಇದನ್ನು ನಿರುದ್ಯೋಗ ಯುವಕ-ಯುವತಿಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭ ಸಂಸ್ಥೆಯ ಸಹಾಯಕ ಅಧಿಕಾರಿ ಸಲ್ಲಾವುದ್ದೀನ್ ಹಾಗೂ ಸಿಬ್ಬಂದಿಗಳು ಇದ್ದರು.