ಕೂಡಿಗೆ, ಜೂ. 18 : ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ಆದಿವಾಸಿ ಕುಟುಂಬಗಳು ಬ್ಯಾಡ ಗೊಟ್ಟಕ್ಕೆ ಬಂದು ಒಂದು ವರ್ಷಗಳೇ ಕಳೆಯುತ್ತಾ ಬಂದಿದೆ. ಇವರಿಗೆ ತಾತ್ಕಾಲಿಕವಾಗಿ ನಿರ್ಮಿಸಿ ಕೊಟ್ಟಿರುವ ಶೌಚಾಲಯ ಹಾಗೂ ಕಸದ ತೊಟ್ಟಿಗಳು ತುಂಬಿ ಹರಿಯುತ್ತಿದ್ದರೂ ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಆದಿವಾಸಿ ಮುಖಂಡರು ತಿಳಿಸಿದ್ದರೂ ಗ್ರಾಮ ಪಂಚಾಯ್ತಿ ಮತ್ತು ಸಂಬಂಧಪಟ್ಟ ಇಲಾಖೆ ಯಾವದೇ ಕ್ರಮಕೈಗೊಂಡಿಲ್ಲ.

ಹಾಡಿಯ ಮುಖ್ಯಸ್ಥರಾದ ಮಲ್ಲಪ್ಪ, ಅಪ್ಪು, ಭರತ್, ಶಂಕರ್, ಅವ್ವಮ್ಮ ಇಂದಿರಾ ಆರೋಪಿಸಿದ್ದಾರೆ. ಈಗಿರುವ ತಾತ್ಕಾಲಿಕ ಶೆಡ್‍ಗಳು ಮಳೆಗಾಳಿಯಿಂದ ಹಾಳಾಗುತ್ತಿವೆ. ಆದ್ದರಿಂದ ನಿಧಾನಗತಿಯಲ್ಲಿ ನಡೆಯುತ್ತಿರುವ ಮನೆ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಿ ಖಾಯಂ ಆಗಿ ವಾಸಿಸುವ ಮನೆಗಳನ್ನು ನೀಡಬೇಕು. ಹಾಗೂ ಇಲಾಖೆಯ ವತಿಯಿಂದ ತಿಂಗಳಿಗೊಮ್ಮೆ ಪಡಿತರ ವಸ್ತುಗಳನ್ನು ಸಮರ್ಪಕವಾಗಿ ನೀಡಬೇಕು ಎಂದು ಒತ್ತಾಯಿಸಿದರು.