ಸುಂಟಿಕೊಪ್ಪ, ಜೂ. 18: ನಾಕೂರು ಶಿರಂಗಾಲ ವ್ಯಾಪ್ತಿಯ ಎಮ್ಮೆಗುಂಡಿ, ನೆಟ್ಲಿ ಬಿ, ಸಂಜೀವ ಎಂಬವರ ತೋಟಗಳಿಗೆ ನುಗ್ಗಿದ್ದ ಕಾಡಾನೆಗಳ ಹಿಂಡು ಬಾಳೆ, ಬಿದಿರು ಸೇರಿದಂತೆ ಇನ್ನಿತರ ಕೃಷಿ ಫಸಲು ಗಳನ್ನು ತಿಂದು ನಾಶಗೊಳಿಸಿದೆ.
ಈ ಭಾಗದ ಗ್ರಾಮಸ್ಥರಾದ ಸಂಜೀವ, ಗಣೇಶ, ಚಂದ್ರ, ದಯಾನಂz, ರಾಮಣ್ಣÀ ನಾಯ್ಕ, ಅನ್ನು ನಾಯ್ಕ, ತಿಮ್ಮಪ್ಪ, ರಮೇಶ, ಇವರುಗಳು ಕಾಡಾನೆಗಳ ಉಪಟಳ ತೋಟದಲ್ಲಿ ಎಲ್ಲೆ ಮೀರಿದ್ದು ಕೃಷಿಫಸಲುಗಳನ್ನು ತಿಂದು ದ್ವಂಸಗೊಳಿಸುತ್ತಿರುವ ಬಗ್ಗೆ ದೂರು ನೀಡಿದ್ದರೂ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕಳೆದ 15 ದಿನಗಳಿಂದ ಎಮ್ಮೆಗುಂಡಿ, ನೆಟ್ಲಿ ಬಿ. ತೋಟ, ವ್ಯಾಪ್ತಿಯ ತೋಟಗಳಲ್ಲಿ ಕಾಡಾನೆಗಳು ಹಗಲಿನಲ್ಲಿ ಬೀಡುಬಿಟ್ಟಿದ್ದು ಕೂಲಿ ಕಾರ್ಮಿಕರು ತೋಟಗಳಲ್ಲಿ ಕೃಷಿಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಲು ಅತಂಕ ಪಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.