ಕೂಡಿಗೆ, ಜೂ. 18 : ಮುಳ್ಳುಸೋಗೆ ಗ್ರಾಮ ಪಂಚಾಯ್ತಿಯ ಜನತಾ ಕಾಲೋನಿ ನಿವಾಸಿ ಆಟೊ ಚಾಲಕನಾಗಿದ್ದ ರಾಮು (64) ಕಳೆದ ಒಂದು ವಾರದ ಹಿಂದೆ ಮನೆಯಿಂದ ಹೊರ ಹೋದವರು ಕಾಣೆಯಾಗಿದ್ದರು. ಭಾನುವಾರ ಸಂಜೆ ಕೂಡ್ಲೂರು ಸಮೀಪದ ಕಾವೇರಿ ನದಿಯಲ್ಲಿ ರಾಮು ಅವರ ಶವ ಪತ್ತೆಯಾಗಿದೆ.

ರಾಮು ಕಾಣೆಯಾಗಿದ್ದ ದಿನ ಅವರ ಕುಟುಂಬದವರು ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಒಂದು ವಾರದ ನಂತರ ರಾಮು ಅವರ ಮೃತ ದೇಹವು ಕೂಡ್ಲೂರಿನ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.

ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತ ದೇಹವನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಶವಗಾರದಲ್ಲಿ ಶವ ಪರೀಕ್ಷೆ ನಡೆಸಿ, ನಂತರ ವಾರಸುದಾರರಿಗೆ ಒಪ್ಪಿಸಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.