ಸೋಮವಾರಪೇಟೆ, ಜೂ. 18: ಮಂಗಳೂರು ವಿಶ್ವವಿದ್ಯಾನಿಲಯದ ಚಿಕ್ಕಅಳುವಾರ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಅಧ್ಯಯನ ವಿಭಾಗದ ಉಪನ್ಯಾಸಕರಾಗಿರುವ ಡಾ. ಮಹಾಂತೇಶ ಪಾಟೀಲ ಅವರಿಗೆ ‘ಕಾವ್ಯಮಾಣಿಕ್ಯ ರಾಜ್ಯ ಪ್ರಶಸ್ತಿ-2017’ ದೊರಕಿದೆ.
‘ಒಡೆದ ಬಣ್ಣದ ಚಿತ್ರಗಳು’ ಎಂಬ ಇವರ ಚೊಚ್ಚಲ ಕವನ ಸಂಕಲನಕ್ಕೆ ಹಾಸನದ ಮಾಣಿಕ್ಯ ಪ್ರಕಾಶನದಿಂದ ಕೊಡಮಾಡುವ ಕಾವ್ಯಮಾಣಿಕ್ಯ ರಾಜ್ಯ ಪ್ರಶಸ್ತಿನೀಡಲಾಗಿದೆ. ಇದೇ ಸಂಕಲನಕ್ಕೆ ಲಡಾಯಿ ಪ್ರಕಾಶನದಿಂದ 2016ರ ಸಾಲಿನ ‘ವಿಭಾ ಸಾಹಿತ್ಯ ಪ್ರಶಸ್ತಿ’ ಸಹ ಲಭಿಸಿತ್ತು. ಪ್ರಸ್ತುತ ಕವನ ಸಂಕಲನಕ್ಕೆ ರಾಜ್ಯಮಟ್ಟದ ಎರಡು ಪ್ರಶಸ್ತಿಗಳು ಲಭಿಸಿದಂತಾಗಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರಂಜಣಗಿಯವರಾದ ಮಹಾಂತೇಶ ಪಾಟೀಲರು, ಸದ್ಯ ಮಂಗಳೂರು ವಿ.ವಿ., ಸ್ನಾತಕೋತ್ತರ ಕೇಂದ್ರ ಚಿಕ್ಕಅಳುವಾರದಲ್ಲಿ ಕನ್ನಡ ಉಪನ್ಯಾಸಕರಾಗಿ
ಸೇವೆ ಸಲ್ಲಿಸುತ್ತಿದ್ದಾರೆ.