ಭಾಗಮಂಡಲ, ಜೂ. 18: ಚೇರಂಬಾಣೆ ಸಮೀಪದ ಪಾಕ ಹೊಳೆಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾಂ ಮೂಲದ ತಿಪ್ಪೆಸ್ವಾಮಿ ಎಂಬಾತ ತುಮಕೂರು ಮೂಲದ ಕಿರಣ ಎಂಬಾತನೊಂದಿಗೆ ಉಡುಪಿಯಿಂದ ಕೆಲಸಕ್ಕಾಗಿ ಚೇರಂಬಾಣೆಗೆ ಬಂದಿದ್ದ ಎನ್ನಲಾಗಿದೆ. ಚೇರಂಬಾಣೆಯ ಹೊಟೇಲ್‍ವೊಂದರಲ್ಲಿ ಕಿರಣ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಇಬ್ಬರು ಕೂಡ ಇಂದು ಮದ್ಯಸೇವಿಸಿ ಸ್ನಾನ ಮಾಡಲೆಂದು ಪಾಕ ಹೊಳೆಗೆ ತೆರಳಿದ್ದರು ಎಂದು ಹೇಳಲಾಗಿದೆ. ಸ್ನಾನ ಮುಗಿಸಿದ ಕಿರಣ ಬೇಗನೆ ಅಲ್ಲಿಂದ ಹಿಂತಿರುಗಿದನಾದರೂ ತಿಪ್ಪೆಸ್ವಾಮಿ ಅಲ್ಲೇ ಇದ್ದ ಎನ್ನಲಾಗಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಭಾಗಮಂಡಲ ಕಿರಣನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
- ಸುನಿಲ್