ವೀರಾಜಪೇಟೆ, ಜೂ.18: ಕೊಡಗು-ಕೇರಳ ಅಂತರರಾಜ್ಯ ಹೆದ್ದಾರಿ ಭಾರೀ ಮಳೆಯಿಂದ ಹಾನಿಗೊಳಗಾಗಿ ಬಂದ್ ಆಗಿರುವ ಮಾಕುಟ್ಟ ರಸ್ತೆಗೆ ಭೇಟಿ ನೀಡಿ ಇಂದು ಪರಿಶೀಲನೆ ನಡೆಸಿದ ರಾಜ್ಯದ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡಿದರು. ಬಳಿಕ ಹೆದ್ದಾರಿಯ ಆಜು ಬಾಜಿನಲ್ಲಿರುವ ಮಣ್ಣಿನ ಬರೆ ಕುಸಿತದಿಂದ ರಸ್ತೆ ತೀವ್ರ ಹಾನಿಗೊಳಗಾಗಿದ್ದು ನೂರಾರು ಮರಗಳು ರಸ್ತೆಗೆ ಉರುಳಿವೆ. ಇದರಿಂದಲೂ ರಸ್ತೆ ಹಾನಿಗೊಳ ಗಾಗಿದೆ. ಅಪಾಯದ ಅಂಚಿನಲ್ಲಿರುವ ರಸ್ತೆಯ ಮೇಲ್ಭಾಗದಲ್ಲಿರುವ ಮರಗಳನ್ನು ತಕ್ಷಣ ಕಡಿಯುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಹೆದ್ದಾರಿ ಸಂಪರ್ಕವನ್ನು ಹೊಂದಿರುವ ಹೆದ್ದಾರಿಯ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವದು. ಸರಕಾರದಲ್ಲಿ ಮಳೆ ಹಾನಿ ಪರಿಹಾರಕ್ಕೆ ಅನುದಾನದ ಕೊರತೆ ಇಲ್ಲ. ಕೂಡಲೇ ರಸ್ತೆ ಕಾಮಗಾರಿಯನ್ನು ಪ್ರಾರಂಭ ಮಾಡಬಹುದು. ತಾ,19 (ನಾಳೆ) ಲೋಕೋಪಯೋಗಿ ಇಲಾಖೆಯ ಸಚಿವರು ಮಾಕುಟ್ಟಕ್ಕೆ ಭೇಟಿ ನೀಡಲಿ ದ್ದಾರೆ. ಅವರಿಗೆ ಸಲ್ಲಿಸುವ ಅಧಿಕಾರಿ ಗಳ ವರದಿಯನ್ನು ನನಗೂ ಕಳುಹಿಸಿ ಕೊಡಿ ಎಂದು ಸಚಿವ ದೇಶಪಾಂಡೆ ಹೇಳಿದರಲ್ಲದೆ ಮಾಕುಟ್ಟದಲ್ಲಿ ಸಮಾರೋಪಾದಿಯಲ್ಲಿ ನಡೆಯುತ್ತಿ ರುವ ಪರಿಹಾರ ಕಾಮಗಾರಿಯನ್ನು ಖುದ್ದು ವೀಕ್ಷಿಸಿದರು.
(ಮೊದಲ ಪುಟದಿಂದ)
ರಸ್ತೆ ಪರಿಶೀಲನೆ ಸಂದರ್ಭ ಸಚಿವರೊಂದಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶಿವು ಮಾದಪ್ಪ, ಜಿಲ್ಲಾಧಿಕಾರಿ ಶ್ರೀವಿದ್ಯಾ, ಉಪ ಅಯುಕ್ತ ರಮೇಶ್ ಕೋನರೆಡ್ಡಿ, ವೀರಾಜಪೇಟೆ ತಹಶೀಲ್ದಾರ್ ಆರ್.ಗೋವಿಂದರಾಜ್, ಕಾಂಗ್ರೆಸ್ ಮುಖಂಡರಾದ ಮಿಟ್ಟು ಚಂಗಪ್ಪ, ಚಂದ್ರಮೌಳಿ, ಹಾಗೂ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು. -ಡಿ.ಎಂ.ಆರ್.