ನಾಪೆÇೀಕ್ಲು, ಜೂ. 18: ನಾಪೆÇೀಕ್ಲು - ಕೊಳಕೇರಿ ಮುಖ್ಯರಸ್ತೆಯ ಕೋಟೆರಿಯಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲಾದ ತಡೆಗೋಡೆಯ ಬಳಿ ಹಾಕಲಾದ ಮಣ್ಣು ಮಳೆ ನೀರಿಗೆ ಕೊಚ್ಚಿ ಹೋಗಿ ಬೃಹತ್ ಪ್ರಮಾಣದ ಹೊಂಡ ನಿರ್ಮಾಣವಾಗಿದೆ.

ಈ ಹೊಂಡವು ಡಾಮರು ರಸ್ತೆಗೆ ತಲಪಿದ್ದು, ಅಪಾಯ ಸಂಭವಿಸುವ ಭೀತಿ ಉಂಟಾಗಿದೆ. ಆದುದರಿಂದ ಕೂಡಲೇ ಇದರ ದುರಸ್ತಿಗೆ ಇಲಾಖೆ ಕ್ರಮಕೈಗೊಳ್ಳಬೇಕೆಂದು ಗ್ರಾಮದ ಅಪ್ಪಚ್ಚಿರ ರೆಮ್ಮಿ ನಾಣಯ್ಯ, ಕುಂಡ್ಯೋಳಂಡ ವಿಶು ಪೂವಯ್ಯ ಮತ್ತಿತರರು ಆಗ್ರಹಿಸಿದ್ದಾರೆ.