ಕೂಡಿಗೆ, ಜೂ. 15: ಕೂಡುಮಂಗಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸಭೆಗಳಲ್ಲಿ ತೀರ್ಮಾನಿಸಿ ದಂತೆ ವಿವಿಧ ಅಭಿವೃದ್ಧಿ ಯೋಜನೆ ಗಳನ್ನು ಕೈಗೊಂಡು ರೂ. 16 ಲಕ್ಷ ಲಾಭಗಳಿಸಿದೆ ಎಂದು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಹೇಳಿದರು. ಕೂಡುಮಂಗಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘದ ಬೆಳವಣಿಗೆಗೆ ಹಾಗೂ ಕಳೆದ ವಾರ್ಷಿಕ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಅನುಷ್ಠಾನಗೊಳಿಸುವದರ ಮೂಲಕ ರೈತರ ಪ್ರಗತಿಗೆ ಸಹಕಾರಿಯಾಗಿರು ತ್ತೇವೆ. ಸಂಘವು 3632 ಸದಸ್ಯರನ್ನು ಹೊಂದಿದ್ದು, ಠೇವಣಿ ಹಣವಾಗಿ 784.98 ಲಕ್ಷ, ಇದುವರೆಗೂ ಸದಸ್ಯರಿಗೆ ವಿವಿಧ ರೀತಿಯ ಸಾಲಗಳನ್ನು ವಿತರಿಸಲಾಗಿದೆ.

ರೈತರಿಗೆ ಕೆಸಿಸಿ ಸಾಲ ರೂ. 546.48 ಲಕ್ಷ, ಜಾಮೀನು ಸಾಲ ರೂ. 5 ಲಕ್ಷ, ನಿರಖು ಠೇವಣಿ ರೂ. 2.32 ಲಕ್ಷ, ಸ್ವಸಹಾಯ ಗುಂಪು ರೂ. 10.08 ಲಕ್ಷ, ಭವಿಷ್ಯನಿಧಿ ಸಾಲ ರೂ. 11.16 ಲಕ್ಷ, ಆಭರಣ ಸಾಲ ರೂ. 217.53 ಲಕ್ಷ, ವ್ಯಾಪಾರಭಿವೃದ್ಧಿ ಸಾಲ ರೂ. 76.89 ಲಕ್ಷ, ಕೃಷಿ ಟ್ರ್ಯಾಕ್ಟರ್ ಸಾಲ ರೂ. 13.15 ಲಕ್ಷ, ಜಂಟಿ ಗುಂಪು ಸಾಲ 3 ಲಕ್ಷ, ಕೃಷಿ ಬೋರ್‍ವೆಲ್ ಸಾಲ ರೂ. 5.85 ಲಕ್ಷ, ಪಿಗ್ಮಿ ಸಾಮಾನ್ಯ ಸಾಲ ರೂ. 246.77, ಆಸಾಮಿ ಸಾಲ ರೂ. 3.81 ಲಕ್ಷ ಹಣವನ್ನು ನೀಡಲಾಗಿದ್ದು, 2017-18ನೇ ಸಾಲಿನಲ್ಲಿ ರೂ. 16 ಲಕ್ಷ ಲಾಭವನ್ನು ಸಂಘ ಗಳಿಸಿದೆ ಎಂದು ಹೇಳಿಕೆ ನೀಡಿದ್ದಾರೆ. 2017-18ನೇ ವಾರ್ಷಿಕ ಮಹಾಸಭೆ ತಾ. 23 ರಂದು ಸಂಘದ ರೈತ ಸಹಕಾರ ಭವನದಲ್ಲಿ ನಡೆಯಲಿದೆ ಎಂದು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪಿ. ಮೀನಾ ತಿಳಿಸಿದ್ದಾರೆ.