ನಾಪೆÇೀಕ್ಲು, ಜೂ. 18: ಜಿಲ್ಲೆಯಾದ್ಯಂತ ಭಾರೀ ಗಾಳಿ ಮಳೆಯಿಂದ ಕಾಫಿ, ಕಾಳುಮೆಣಸು ಸೇರಿದಂತೆ ಎಲ್ಲಾ ಬೆಳೆಗಳಿಗೂ ಹಾನಿಯಾಗಿ ಸಷ್ಟ ಸಂಭವಿಸಿದೆ. ರಾಜ್ಯ ಸರಕಾರ ರಾಷ್ಟ್ರೀಕೃತ ಮತ್ತು ಜಿಲ್ಲಾ ಬ್ಯಾಂಕ್ಗಳಲ್ಲಿರುವ ರೈತರ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು ಎಂದು ಜಯಕರ್ನಾಟಕ ಸಂಘಟನೆಯ ಮಡಿಕೇರಿ ತಾಲೂಕು ಅಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ ಒತ್ತಾಯಿಸಿದ್ದಾರೆ. ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿದ ಅವರು ಸರಕಾರ ಹೈಟೆನ್ಷನ್ ಲೈನ್, ರೈಲ್ವೇ ಯೋಜನೆ ಸೇರಿದಂತೆ ಜಿಲ್ಲೆಗೆ ಮಾರಕವಾಗುವಂತಹ ಹಲವು ಯೋಜನೆಗಳ ಮೂಲಕ ಕೊಡಗಿನ ಜನರ ಬದುಕನ್ನು ನಾಶ ಮಾಡಲು ಮುಂದಾಗಿದೆ. ಅದರೊಂದಿಗೆ ಪ್ರಕೃತಿ ವಿಕೋಪ ಒಂದೆಡೆಯಾದರೆ, ಮಂಡ್ಯದ ರೈತರನ್ನು ಖುಷಿ ಪಡಿಸಲು ಜಿಲ್ಲೆಯ ಬೆಟ್ಟ ಸಾಲುಗಳಲ್ಲಿ ಮೋಡ ಬಿತ್ತನೆ ಮಾಡುವದರ ಮೂಲಕ ರೈತರ ಬೆಳೆ ನಷ್ಟ ಮಾಡುವ ಕಾರ್ಯ ಕೈಗೊಂಡಿದೆ ಎಂದು ಆರೋಪ ವ್ಯಕ್ತಪಡಿಸಿದ ಅವರು ಸರಕಾರ ಕೂಡಲೇ ಸಾಲ ಮನ್ನಾಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.