ಕೂಡಿಗೆ, ಜೂ. 19: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಗೆ ಹೆಚ್ಚು ನೀರು ಬರುತ್ತಿದೆ. ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬಿದ್ದ ಪರಿಣಾಮದಿಂದ ಹಾರಂಗಿ ಅಣೆಕಟ್ಟೆ ಈಗಾಗಲೇ ಅರ್ಧ ಭಾಗದಷ್ಟು ತುಂಬಿದ್ದು, ಪೂರ್ತಿ ತುಂಬಲು ಇನ್ನು 22 ಅಡಿಯಷ್ಟು ಬಾಕಿ ಇದೆ. ಅಣೆಕಟ್ಟೆಯಲ್ಲಿ ನೀರಿನ ಮಟ್ಟ 2831.50 ಅಡಿ ಇದ್ದು, ತಳಮಟ್ಟದಿಂದಿರುವ ನೀರಿನ ಸಂಗ್ರಹ ಮಟ್ಟ 3.4152 ಟಿಎಂಸಿ, ಈಗಿರುವ ನೀರಿನ ಮಟ್ಟ 2.664 ಟಿಎಂಸಿ, ಒಳಹರಿವು 968 ಕ್ಯೂಸೆಕ್ಸ್ ಇದ್ದು, ಕಳೆದ ವರ್ಷಕ್ಕಿಂತ ನೀರು ಪ್ರಮಾಣ ಹೆಚ್ಚಿದೆ ಎಂದು ಸಹಾಯಕ ಇಂಜಿನಿಯರ್ ನಾಗರಾಜ್ ತಿಳಿಸಿದ್ದಾರೆ.