ಶನಿವಾರಸಂತೆ, ಜೂ. 20: ಪಟ್ಟಣದ ಯೋಗ ಬಂಧುಗಳು, ಸಹಕಾರ ಬ್ಯಾಂಕ್ನ ಆಡಳಿತ ಮಂಡಳಿ ಹಾಗೂ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ 4ನೇ ವರ್ಷದ ಯೋಗ ದಿನಾಚರಣೆಯನ್ನು ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಇತ್ತೀಚೆಗೆ ಯೋಗ ಶಿಬಿರ ಆರಂಭಗೊಂಡಿದ್ದು, ಬ್ಯಾಂಕ್ ನಿರ್ದೇಶಕ ಟಿ.ಆರ್. ಗಿರೀಶ್ ಶಿಬಿರವನ್ನು ಉದ್ಘಾಟಿಸಿದರು. ಬೆಂಗಳೂರಿನ ಯೋಗತಜ್ಞ ಅಶೋಕ್ ವಿ. ರೆಡ್ಡಿ ಯೋಗದ ಬಗ್ಗೆ ಮಾರ್ಗದರ್ಶನ ನೀಡಿದರು. ಮಕ್ಕಳ ತಜ್ಞ ಡಾ. ಆರ್.ವಿ. ಚಿದಾನಂದ್ ಆಹಾರ ಪದ್ಧತಿ ಮತ್ತು ಯೋಗದ ಬಗ್ಗೆ ಅರಿವು ಮೂಡಿಸಿದರು.
ತಾ. 21 ರಂದು (ಇಂದು) ಬೆಳಿಗ್ಗೆ ಅಂತರರಾಷ್ಟ್ರೀಯ ಯೋಗ ದಿನದ ವಿಶೇಷ ಆಚರಣೆ ಹಾಗೂ ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಎಸ್. ವಸಂತ್ಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವ ಮೈಸೂರಿನ ಯೋಗಾಚಾರ್ಯ ಬಿ.ಪಿ. ಮೂರ್ತಿ ಯೋಗಾಸನದ ಪ್ರದರ್ಶನ ಮತ್ತು ಯೋಗದ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.
ದಿನನಿತ್ಯದ ಯೋಗ ಶಿಕ್ಷಕರಾಗಿ ಕುಮಾರ್, ಎ.ಡಿ. ಮೋಹನ್ಕುಮಾರ್ ಹಾಗೂ ಬೀನಾ ಅರವಿಂದ್ ಪಾಲ್ಗೊಂಡಿದ್ದಾರೆ ಎಂದು ಯೋಗ ಗುರು ಮೋಹನ್ ತಿಳಿಸಿದ್ದಾರೆ.