*ಗೋಣಿಕೊಪ್ಪಲು, ಜೂ. 20 : ಅಕ್ರಮ ಮಧ್ಯ ಮಾರಾಟ ದಂಧೆ ಮಿತಿ ಮೀರಿದ್ದು, ಅಬಕಾರಿ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕಾರ್ಯಪ್ರವೃತ್ತರಾಗಬೇಕೆಂದು ವೀರಾಜಪೇಟೆ ತಾ.ಪಂ. ಅಧ್ಯಕ್ಷ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಸೂಚಿಸಿದರು. ಪೆÇನ್ನಂಪೇಟೆ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದರು.ತಾಲೂಕಿನಾಂದ್ಯಂತ ಮನೆ ಮನೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ, ವಾಹನಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಅಬಕಾರಿ ಇಲಾಖೆ ಮೌನ ವಹಿಸಿ ಕುಳಿತ್ತಿದೆ. ಅಕ್ರಮ ಮದÀ್ಯ ಮಾರಾಟ ಮಾಡುತ್ತಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇಲಾಖೆ ಇವರೊಂದಿಗೆ ಶಾಮೀಲಾಗಿರುವ ದರಿಂದ ಅಕ್ರಮ ಮದ್ಯ ಮಾರಾಟ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ಅಬಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸಮಸ್ಯೆ ತಾಲೂಕಿನಾದ್ಯಂತ ಕಂಡು ಬಂದಿದೆ. ಅಕ್ರಮ ಮಧ್ಯ ಮಾರಾಟ ತಡೆಗಟ್ಟಲು ನಿದ್ರ್ಯಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಅಬಕಾರಿ ಅಧಿಕಾರಿ ಸುಮನ್ ಪಟೇಲ್ ಅವರಿಗೆ ತಿಳಿಸಿದರು. ಇದಕ್ಕೆ ದ್ವನಿ ಗೂಡಿಸಿದ ಸದಸ್ಯ ಮಾಳೇಟಿರ ಪ್ರಶಾಂತ್ ಅವರು ಕೆದಮುಳ್ಳೂರು ಗ್ರಾಮ ಜಂಕ್ಷನ್ಗಳಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಮದ್ಯ ಮಾರಾಟ ಮಾಡುತ್ತಿದ್ದಾರೆ. ಇವರಿಗೆ ಇಲಾಖೆಯ ಸಿಬ್ಬಂದಿಗಳೇ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಸಹ ಅಕ್ರಮ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಚಾಲಕರನ್ನು ಬದಲಾಯಿಸಿದರೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗಬಲ್ಲದು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಸುಮನ್ ಪಾಟೇಲ್ ಕಳೆದ 2 ತಿಂಗಳಿನಲ್ಲಿ 46 ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ.
ಸಾರ್ವಜನಿಕರು ಯಾವದೇ ಭಯವಿಲ್ಲದೆ ನೇರವಾಗಿ ದೂರು ನೀಡಬಹುದು. ಅಕ್ರಮ ಮದÀ್ಯ ಮಾರಾಟ
(ಮೊದಲ ಪುಟದಿಂದ) ಮಾಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಮಳೆ ಹಾನಿಯಿಂದ ಉಂಟಾಗುವ ಅತಿವೃಷ್ಟಿ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದು, ಮನೆ ಹಾನಿ ಪರಿಹಾರವನ್ನು ಮೂರು ಸಾವಿರದ ಐದುನೂರರಿಂದ, ಐದು ಸಾವಿರಕ್ಕೆ ಏರಿಸಲಾಗಿದೆ. ಈ ಪ್ರದೇಶದಲ್ಲಿ ಮುಂಜಾಗೃತ ಕ್ರಮವಾಗಿ ವಿಶೇಷ ಸಿಬ್ಬಂದಿಗಳನ್ನು ಈಜುಗಾರರನ್ನು ಅವಶ್ಯಕತೆ ಇದ್ದ ಸ್ಥಳಲ್ಲಿ ಬೋಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಹೊಳೆ ದಡಗಳಲ್ಲಿ ವಾಸಿಸುವ ಜನರು ಬೇರೆಡೆ ಸ್ಥಳಾಂತರಗೊಳ್ಳುವಂತೆ ನೋಟಿಸು ಜಾರಿ ಮಾಡಿದರೂ ಜನ ಸ್ಥಳಾಂತರಗೊಳ್ಳಲು ಮುಂದಾಗಿಲ್ಲ. ಸಮಸ್ಯೆ ಉಂಟಾದರೆ ಇದಕ್ಕೆ ಜಿಲ್ಲಾಡಳಿತ ಹೊಣೆಯಾಗುವದಿಲ್ಲ. ಶಾಸಕರೊಂದಿಗೆ ಖುದ್ದು ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಚರ್ಚಿಸಿ ಸ್ಥಳಾಂತರಗೊಳ್ಳಲು ತಿಳಿಸಲಾಗಿದೆ. ಪರ್ಯಾಯವಾಗಿ ಅಲ್ಲಿ ವಾಸಿಸುವ ಜನರಿಗೆ ಬೇರೆಡೆ ಸ್ಥಳಗಳನ್ನು ಕಾಯ್ದಿರಿಸಲಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜು ಸಭೆಗೆ ಮಾಹಿತಿ ನೀಡಿದರು.
ಆನೆ ಧಾಳಿಯಿಂದ ಉಂಟಾದ ಹಾನಿಗೆ ಪರಿಹಾರವಾಗಿ 11 ಲಕ್ಷ ಪರಿಹಾರ ಪೆÇನ್ನಂಪೇಟೆ ವಲಯ ಅರಣ್ಯ ಇಲಾಖೆಯಿಂದ ನೀಡಲಾಗಿದೆ. ಹುಲಿ ಧಾಳಿಯಿಂದ ಉಂಟಾದ ಹಾನಿ ಮತ್ತು ಪರಿಹಾರವಾಗಿ 96 ಸಾವಿರ ರೂಪಾಯಿ ನೀಡಲಾಗಿದೆ. ಹುಲಿ ಧಾಳಿಯಿಂದ ಸಾವನ್ನಪ್ಪಿದ ಜಾನುವಾರುಗಳಿಗೆ 10 ಸಾವಿರ ರೂಪಾಯಿ ಪರಿಹಾರ ಬದಲಾಗಿ 20 ಸಾವಿರ ರೂಪಾಯಿ ನೀಡಲು ಇಲಾಖೆ ಮುಂದಾಗಿದೆ. ಈ ಬಗ್ಗೆ ಮೇಲಿನ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಬಾರಿ ಅತೀರ ಭತ್ತದ ಬೀಜಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಬೇಡಿಕೆಗೆ ಅನುಸಾರವಾಗಿ ಬೀಜವನ್ನು ಪೂರೈಕೆ ಮಾಡಿದ್ದೇವೆ ವೈಜ್ಞಾನಿಕ ತಂತ್ರಜ್ಞಾನ ಕೃಷಿಗೆ ಸಬ್ಸಿಡಿ ಮೂಲಕ ಪೆÇ್ರೀತ್ಸಾಹ ನೀಡಲಾಗುವದು ಮತ್ತು ಆರ್.ಟಿ.ಸಿ ಉತ್ತಮ ಗುಣಮಟ್ಟದ ಥಾಟ್ ಗಳನ್ನು ರೈತರಿಗೆ ವಿತರಿಸಲಾಗುತ್ತಿದೆ. ಎಂದು ಕೃಷಿ ಇಲಾಖೆಯ ಅಧಿಕಾರಿ ರೀನಾ ಸಭೆಗೆ ಮಾಹಿತಿ ನೀಡಿದರು. ಕಳೆದ ಬಾರಿಯಂತೆ ಕಳಪೆ ಬೀಜವನ್ನು ವಿತರಿಸದೆ ಉತ್ತಮ ಬೀಜಗಳ ಪೂರೈಕೆಗೆ ಬೀಜ ಪರೀಕ್ಷೆ ನಡೆಸಬೇಕು ಮತ್ತು ಬರ್ಮ ಭತ್ತ ಬೀಜದ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಸೂಚಿಸಿದರು.
ಬಿರುನಾಣಿ ಭಾಗದಲ್ಲಿ ಪಶು ವೈದ್ಯಾಧಿಕಾರಿಗಳು ಜಾನುವಾರುಗಳಿಗೆ ಹಾಕುವ ಕಾಲು ಬಾಯಿ ಲಸಿಕೆಗೆ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾರೆ ಎಂದು ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ತಿಳಿಸಿದರು. ಇದಕ್ಕೆ ಉತ್ತರಿಸಿದ ಪಶುವೈದ್ಯಾಧಿಕಾರಿ ಈ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದರು. ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ 32 ಚಿಕಿತ್ಸಾಲಯಗಳಲ್ಲಿ ಕೇವಲ 6 ಜನರಷ್ಟೇ ಡಿ ಗ್ರೂಪ್ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಗೆ ಈ ಬಾರಿ ಯಾವದೇ ಬಜೆಟ್ನಿಂದ ಹಣ ಬಂದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಕಳೆದ 2 ವರ್ಷಗಳಿಂದ ಭಾಗ್ಯಲಕ್ಷ್ಮಿ ಬಾಂಡ್ಗಳು ಸರಿಯಾಗಿ ವಿತರಣೆಯಾಗುತ್ತಿಲ್ಲ. ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಈ ಬಗ್ಗೆ ಶಿಶು ಅಭಿವೃದ್ದಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಜಯಾ ಪೂವಯ್ಯ ಒತ್ತಾಯಿಸಿದರು. ಇದಕ್ಕೆ ಉತ್ತರ ನೀಡಿದ ಶಿಶು ಅಭಿವೃದ್ದಿ ಸೀತಾಲಕ್ಷ್ಮಿ 2006ರಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು, ವರ್ಷಂಪ್ರತಿ ಸರಿಯಾದ ಕ್ರಮದಲ್ಲಿ ಬಾಂಡ್ ವಿತರಣೆ ಆಗಿದೆ. ಕೆಲವು ತಾಂತ್ರಿಕ ದೋಷದಿಂದ ಈ ಬಾರಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಬಾಂಡ್ ವಿತರಣೆ ಆಗಲು ತಡವಾಗಿದೆ. ಸದ್ಯದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದರು. ಇಲಾಖೆಯಲಿ ನೌಕರರು ಇಲ್ಲದೇ ಇರುವದರಿಂದ ಪರಿಪೂರ್ಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ತಾಲೂಕಿನ 366 ಕೇಂದ್ರಗಳನ್ನು ನಿರ್ವಹಿಸಲು ಅಸಾಧ್ಯವಾಗಿದೆ. ಹೆಚ್ಚುವರಿ ಸಿಬ್ಬಂದಿಗಳನ್ನು ನೀಡಿದರೆ ಉತ್ತಮ ಕಾರ್ಯನಿರ್ವಹಣೆ ಮಾಡಬಹುದು. ಇಲಾಖೆಯಲ್ಲಿ ಸಿಬ್ಬಂದಿಗಳ ಕೊರೆತೆಗಳನ್ನು ಮನಗಂಡು ಸರ್ಕಾರವೇ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಸ್ಥಳೀಯ ಅಂಗನವಾಡಿ ಕೇಂದ್ರಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಲು ಆದೇಶಿಸಿದೆ. ಆದೇಶದ ಅನ್ವಯ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಇದರ ವಿರುದ್ದ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ಮಧು ವನವನ್ನು ಅಭಿವೃದ್ದಿ ಪಡಿಸಲು ಕ್ರಮ ಕೈಗೊಳ್ಳಬೇಕೆಂದು ಮಾಳೇಟಿರ ಪ್ರಶಾಂತ್ ಸೂಚಿಸಿದರು.
ಈ ಬಾರಿಯ ಮಳೆ ಹಿನ್ನಲೆಯಲ್ಲಿ ತಾಲ್ಲೂಕುನಾದ್ಯಂತ 267 ಕಂಬಗಳು ಮುರಿದು ಬಿದ್ದಿವೆ. ಇದರಲ್ಲಿ 218 ಕಂಬಗಳನ್ನು ದುರಸ್ಥಿ ಮಾಡಲಾಗಿದೆ. ಹಾಗೂ 24 ಟಿ.ಸಿ.ಗಳು ದುರಸ್ಥಿಗೆ ಬಂದಿದ್ದು, ಶೀಘ್ರದಲ್ಲೇ ದುರಸ್ಥಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಗೋಣಿಕೊಪ್ಪಲು ಚೆಸ್ಕಾಂ ಉಪವಿಭಾಗದ ಇಂಜಿನಿಯರ್ ಅಂಕಯ್ಯ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯಲ್ಲಿ ಮಕ್ಕಳ ಚುಚ್ಚು ಮದ್ದು ಸೇರಿದಂತೆ ಸಿಬ್ಬಂದಿಗಳ ಕೊರತೆ ನಿಭಾಯಿಸಲಾಗಿದೆ. ಟಿ.ಬಿ. ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆರೊಗ್ಯ ಇಲಾಖೆ ಅಧಿಕಾರಿ ಯತಿರಾಜ್ ಮಾಹಿತಿ ನೀಡಿದರು.
ಶಿಕ್ಷಣ ಇಲಾಖೆಯಲ್ಲಿ ತಾಲೂಕಿನ 58 ಶಾಲೆಗಳು 150 ಕೊಠಡಿ ದುರಸ್ಥಿ ಮಾಡಬೇಕಿದೆ. 17 ಶಾಲೆಯ ಕೊಠಡಿಗಳನ್ನು ನೆಲಸಮಗೊಳಿಸಬೇಕಾಗಿದೆ. ಮತ್ತು ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪಾಲಿಬೆಟ್ಟದ ಎಮ್ಮೆಗುಂಡಿ ಶಾಲೆಯ ಕಾಮಗಾರಿಯಲ್ಲಿ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡುವ ಮೂಲಕ ವಂಚನೆ ಮಾಡಿದ್ದಾರೆ ಎಂದು ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಆರೋಪಿಸಿದರು. ಕಾಮಗಾರಿ ಶೀಘ್ರದಲ್ಲಿ ನಡೆಯಲಿ ಎಂಬ ಚಿಂತನೆಯಿಂದ ಗುತ್ತಿಗೆದಾರರಿಗೆ ತನ್ನ ಸ್ವಂತ ಮನೆ ಕೆಲಸಕ್ಕೆ ತಂದಂತಹ ಒಂದು ಟ್ರ್ಯಾಕ್ಟರ್ ಮರಳನ್ನು ಉಚಿತವಾಗಿ ನೀಡಿ ಸಹಕರಿಸಿದರೂ ನಮ್ಮ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಕಾಮಗಾರಿ ಬಿಲ್ಲ್ ಪಾವತಿಸದೇ ತಡೆಯಿಡಿಯುವಂತೆ ಈ ಸಂದರ್ಭ ಸೂಚಿಸಿದರು.
ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಕಲ್ಯಾಣ ಇಲಾಖೆ, ಅಕ್ಷರ ದಾಸೋಹ ಮೀನುಗಾರಿಕೆ ಸಹಕಾರ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿಯನ್ನು ನೀಡಿದರು. ಈ ಸಂದರ್ಭ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್, ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ತಹಶೀಲ್ದಾರ್ ಗೋವಿಂದರಾಜು ಉಪಸ್ಥಿತರಿದ್ದರು.